This is the title of the web page

ರೋಗ ಮುಕ್ತಿಗಾಗಿ ಯೋಗಾಸನವೇ ಆಧಾರ : ಪ್ರಧಾನಿ ಮೋದಿ 

 

ಮೈಸೂರು : 8 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಮೈಸೂರು ಅರಮನೆ ಆವರಣದಲ್ಲಿ ಪ್ರಧಾನಿ ಮೋದಿ ಅವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, 8 ನೇ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ. ಯೋಗ ಮಾತ್ರ ನಿರೋಗದಿಂದ ಬದುಕುವಂತೆ ಮಾಡುತ್ತೆ. ನಮ್ಮೆಲ್ಲರ ಜೀವನಕ್ಕೆ ವಿಶ್ವಾಸ ನೀಡುತ್ತಿರುವುದೇ ಯೋಗ. ಇಡೀ ವಿಶ್ವಕ್ಕೇ ಪಸರಿಸಿರುವ ಯೋಗದಿಂದಲೇ ವಿಶ್ವಾಸ ಎಂದರು.

ಮಾನವೀಯತೆಗಾಗಿ ವಿಶ್ವದ ಎಲ್ಲೆಡಯಲ್ಲೂ ಯೋಗ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. ಯೋಗದಿಂದ ಎಲ್ಲರಿಗೂ ಶಾಂತಿ ಸಿಗಲಿದೆ. ಯೋಗದ ಸಂದೇಶ ಸಾರಲು ವಿಶ್ವಸಂಸ್ಥೆಗೆ ಧನ್ಯವಾದ. ಸಮಾಜದಲ್ಲಿ ಶಾಂತಿ, ವಿಶ್ವದ, ದೇಶದ ಶಾಂತಿಗಾಗಿ ಯೋಗ, ಪ್ರಪಂಚ ಮೂಲೆ ಮೂಲೆಗಳಲ್ಲಿ ಯೋಗಾಭ್ಯಸ ನಡೆಸಲಾಗುತ್ತಿದೆ. ಮಾನವೀಯತೆಗಾಗಿ ವಿಶ್ವದಲ್ಲಿ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಯೋಗದಿಂದ ಇಡೀ ವಿಶ್ವವೇ ಒಗ್ಗೂಡುತ್ತಿದೆ. ನಮ್ಮ ಜೀವನ ಯೋಗದಿಂದ ಶುರುವಾಗುತ್ತದೆ. ವಿಶ್ವದಲ್ಲಿ ರೋಗ ಮುಕ್ತಿಗಾಗಿ ಯೋಗಾಸನವೇ ಆಧಾರವಾಗಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಜೊತಗೆ 15 ಸಾವಿರ ಜನ ಯೋಗ ಮಾಡಿದ್ದಾರೆ , ಇದರಲ್ಲಿ 1,200 ವಿದ್ಯಾರ್ಥಿಗಳಿದ್ದಾರೆ. 45 ನಿಮಿಷ ನಡೆಯುವ ಕಾರ್ಯಕ್ರಮದಲ್ಲಿ 19 ಆಸನಗಳು ಪ್ರದರ್ಶನಗೊಂಡಿವೆ.

You might also like
Leave a comment