Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

Crime News

ಸಲಿಂಗಕಾಮಿಯ ಕಾಟಕ್ಕೆ ಯುವಕನ ಆತ್ಮಹತ್ಯೆ 


ಧಾರವಾಡ: ಸಲಿಂಗಕಾಮಿಯ ಕಾಟಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದ ಕೆಲಗೇರಿ ಕೆರೆಯಲ್ಲಿ ನಡೆದಿದೆ.

ಪವನ್​ ಎಂಬಾತನ ಕಿರುಕುಳಕ್ಕೆ ಯಾಸೀನ್ ರೋಟಿವಾಲೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಯಾಸೀನ್ ರೋಟಿವಾಲೆ ಧಾರವಾಡ ಅತ್ತಿಕೊಳ್ಳದ ನಿವಾಸಿ. ಕಳೆದ ಅಕ್ಟೋಬರ್ 12 ರಂದು ತನ್ನ ಮನೆಯಿಂದ ಹೊರ ಹೋಗಿದ್ದ ಆತ, ಅಕ್ಟೋಬರ್ 15 ರಂದು ಧಾರವಾಡದ ಕೆಲಗೇರಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಯಾಸೀನ್ ಹಾಗೂ ಪವನ್ ಮಧ್ಯೆ ಏಳೆಂಟು ತಿಂಗಳಿನಿಂದ ಗೆಳೆತನ ಇತ್ತು. ಈ ಗೆಳೆತನ ಸಲಿಂಗಕಾಮಕ್ಕೂ ಕಾರಣವಾಗಿದೆ. ಅಲ್ಲದೇ ಪವನ್ ಎಲ್ಲರ ಮುಂದೆ ನಾನು ಯಾಸೀನ್‌ನನ್ನು ಮದುವೆ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದನಂತೆ. ಪವನ್ ಯಾಸೀನ್‌ಗೆ ಪ್ರತಿನಿತ್ಯ ಫೋನ್ ಮಾಡಿ ತನ್ನ ಸಂಪರ್ಕಕ್ಕೆ ಬರುವಂತೆ ಕಿರುಕುಳ ನೀಡುತ್ತಿದ್ದನಂತೆ.

ಅಲ್ಲದೇ ಅಕ್ಟೋಬರ 12 ರಂದು ಪವನ್, ಯಾಸೀನ್ ಜೊತೆಯೇ ಇದ್ದ ಎಂಬುದು ಯಾಸೀನ್ ಪೋಷಕರ ಆರೋಪವಾಗಿದೆ. ಪವನ್ ನೀಡುತ್ತಿದ್ದ ಕಿರುಕುಳದಿಂದಲೇ ಬೇಸತ್ತು ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಂದೆ ರಫೀಕ ಅವರು ವಿದ್ಯಾಗಿರಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪವನ್‌ನನ್ನು ಬಂಧಿಸಿದ್ದಾರೆ.


A B Dharwadkar
the authorA B Dharwadkar

Leave a Reply