This is the title of the web page

ಫೋಟೋ ಶೂಟ್ ಹುಚ್ಚುತನಕ್ಕೆ ಯುವಕ ಬಲಿ

ಬೆಳಗಾವಿ, 28- ಯುವಕರ ಫೋಟೋ ಶೂಟ್ ಹುಚ್ಚಿಗೆ ಬೆಳಗಾವಿ ಸದಾಶಿವನಗರದ 19 ವರ್ಷದ ಯುವಕನೊಬ್ಬ ಬಲಿಯಾಗಿದ್ದಾನೆ. ರಸ್ತೆಯ ಮೇಲೆ ನಿಂತು ಫೋಟೋ ಗೆ ಪೋಸ್ ಕೊಟ್ಟಿದ್ದ ಆತನ ಮೇಲೆ ಕಾರೊಂದು ಹಾಯ್ದು ಆತ ಸ್ಥಳದಲ್ಲಿಯೇ ಅಸುನೀಗಿದ್ದಾನೆ.

ಆದಿತ್ಯ ವಿಶ್ವನಾಥ ಕರಡಿ ಮೃತ ಯುವಕ. ಶಿಂಧೋಳಿ ಗ್ರಾಮದ ಮದನ್ ಮುತ್ತಪ್ಪ ಕಟ್ಟಿ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಯುವಕರ ಒಂದು ಗುಂಪು ಇಂದು ಬೆಳಿಗ್ಗೆ ಕಣಬರ್ಗಿಯ ಸಿದ್ದೇಶ್ವರ ಮಂದಿರದ ಬೆಟ್ಟಕ್ಕೆ ಭೆಟ್ಟಿ ನೀಡಿದ ನಂತರ ಸಿದ್ದೇಶ್ವರ ಮಂದಿರಕ್ಕೆ ಹೋಗುವ ದಾರಿಯಲ್ಲಿ ಹುಡುಗ, ಹುಡುಗಿಯರು ಪೋಟೋ ಶೂಟ್ ಮಾಡುವಾಗ ವೇಗದಿಂದ ಆಗಮಿಸಿದ ಕಾರು ಹಾಯ್ದು ಈ ಅಪಘಾತ ಸಂಭವಿಸಿದೆ.

ಬೆಳಗಾವಿ ಉತ್ತರ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You might also like
Leave a comment