This is the title of the web page

ಉಗ್ರಗೊಂಡ ಅಗ್ನಿಪಥ ಹೋರಾಟ ; ಓರ್ವ ಬಲಿ 

ಹೈದಾರಾಬಾದ‌, ೧೭- ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಅಗ್ನಿಪಥ‌ ಯೋಜನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತೆಲಂಗಾಣಕ್ಕೂ ಹಬ್ಬಿದ್ದು, ಈ ಪ್ರತಿಭಟನಾ ಕಿಚ್ಚಿಗೆ ಸಿಕಂದರಾಬಾದ‌ ರೈಲ್ವೇ ನಿಲ್ದಾಣದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಹೈದರಾಬಾದ‌ ನಗರ ಹೊತ್ತಿ ಉರಿಯುತ್ತಿದ್ದು, ಅಗ್ನಿಪಥ‌ ಯೋಜನೆ ವಿರೋಧಿಸಿ ಪ್ರತಿಭಟನಾಕಾರರು ಉಗ್ರ ಸ್ವರೂಪ ತಾಳಿದ್ದಾರೆ.

ಈ ಪ್ರತಿಭಟನೆ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪರಿಣಾಮ ಪ್ರತಿಭಟನಾನಿರತ ವ್ಯಕ್ತಿ ಮೃತನಾಗಿದ್ದು, ಪ್ರತಿಭಟನೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಈ ಘಟನೆಯಲ್ಲಿ ಒರ್ವ ವ್ಯಕ್ತಿ ಮೃತನಾಗಿದ್ದು, 8 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ.

ಮೃತ ವ್ಯಕ್ತಿಯನ್ನು ದಾಮೋದರ‌ ಕುರಶಿಯಾ ಎನ್ನಲಾಗಿದೆ. ಇವರು ಸೇನಾ ನೇಮಕಾತಿ ಮಂಡಳಿಗೆ ತೆರಳಿ ಅಲ್ಲಿಂದ ರೈಲ್ವೆ ನಿಲ್ದಾಣಕ್ಕೆ ಪ್ರತಿಭಟನೆಯ ಭಾಗವಾಗಿ ಬಂದಿದ್ದಾರೆ ಎನ್ನಲಾಗಿದೆ. ಪ್ರತಿಭಟನೆಯಲ್ಲಿ ಗಾಯಗೊಂಡವರನ್ನು ಸಮೀಪದ ಗಾಂಧಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.

 

 

You might also like
Leave a comment