This is the title of the web page

ಈಜುಕೊಳದಲ್ಲಿ ತಲೆಗೆ ಪೆಟ್ಟು ಬಿದ್ದು ಯುವಕನ ಸಾವು

ಬೆಳಗಾವಿ, ೨- ಬೆಳಗಾವಿಯ ಹನುಮಾನ ನಗರದ ಈಜುಕೊಳದಲ್ಲಿ ಡೈವ್ ಮಾಡಿದಾಗ ಯುವಕನೊಬ್ಬ ತಲೆಗೆ ತೀವ್ರ ಗಾಯಗೊಂಡು ಅಸು ನೀಗಿದ್ದಾನೆ.

17 ವರುಷದ ಗುರುದೇವ ಸಿಂಗ್ ಎಂಬ ಯುವಕ ಸೋಮವಾರ ಈಜಾಡಲು ಈಜುಗೊಳ್ಳದ ಸ್ವಲ್ಪ ಎತ್ತರದ ಸ್ಥಳದಿಂದ ನೀರಿಗೆ ಧುಮುಕಿದ್ದಾನೆ. ಆಗ ಅವರ ತಲೆಯು ಈಜುಗೊಳ್ಳದ ಗೋಡೆಯ ಅಂಚಿಗೆ ತಗುಲಿ, ತೀವ್ರ ರಕ್ತಸ್ರಾವವಾಯಿತು. ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ ಹೆಚ್ಚು ರಕ್ತಸ್ರಾವವಾದ್ದರಿಂದ ಆತ ಕೊನೆಯುಸಿರೆಳೆದ.

ಮೃತನ ಮನೆಯಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ತಂದೆ ಕಮಾಂಡೊ ಗುರುಪ್ರೀತ ಸಿಂಗ್ ಅವರು ಬೆಳಗಾವಿಯ ಕಮಾಂಡೊ ಕೋಟ್ಸ್ ಕ್ಯಾಂಪ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಕುರಿತು ಎಪಿಎಮ್‍ಸಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You might also like
Leave a comment