This is the title of the web page

ಮೊಬೈಲ್ ತಂದ ಆಪತ್ತು; ಬೈಕ್ ಸಮೇತ ಚರಂಡಿಯಲ್ಲಿ ಬಿದ್ದು ಯುವಕನ ಸಾವು

ಬೆಳಗಾವಿ, ೧೬-ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಯುವಕನೊಬ್ಬ ರಸ್ತೆ ಬದಿ ಚರಂಡಿಯಲ್ಲಿ ಬಿದ್ದು ಅಸುನೀಗಿದ ಘಟನೆ
ವಡಗಾವಿಯ ದತ್ತ ಗಲ್ಲಿಯ ದತ್ತ ಮಂದಿರ ಬಳಿ ಗುರುವಾರ ಮುಂಜಾನೆ ಸಂಭವಿಸಿದೆ.

ಮೃತ ಯುವಕ ಚಾವಡಿ ಗಲ್ಲಿಯ ನಿವಾಸಿಯಾಗಿದ್ದು, ಸ್ಕೂಟಿ ಮೇಲೆ ಹೋಗುತ್ತಿದಾಗ ಚರಂಡಿಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡು, ಸ್ಥಳದಲ್ಲಿಯೇ ಯುವಕ ಸಾವನ್ನಪ್ಪಿದ್ದಾರೆ.

ಶಹಾಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You might also like
Leave a comment