ಬೆಳಗಾವಿ: ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳ ಮೇಲೆ ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದು 13 ಬೈಕಗಳು ಸಂಪೂರ್ಣ ನಜ್ಜುಗುಜ್ಜು ಆಗಿರುವ ಘಟನೆ ಬೆಳಗಾವಿ ನಗರದ ಲೇಕ್ ವ್ಯೂ ಆಸ್ಪತ್ರೆ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಆಸ್ಪತ್ರೆ ಎದುರು ದ್ವಿಚಕ್ರ ವಾಹನಗಳ ನಿಲುಗಡೆ ಸ್ಥಳದಲ್ಲಿ ರೋಗಿಗಳ ಸಂಬಂಧಿಕರು ಬೈಕಗಳನ್ನು ನಿಲ್ಲಿಸಿದ್ದರು. ಮಹಾಂತೇಶ ನಗರ ಕಡೆಯಿಂದ ವೇಗವಾಗಿ ಬಂದ ಬುಲೇರೋ ಕಾರು ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ಆ ವಾಹನಗಳ ಮೇಲೆ ಹರಿದಿದೆ.
ಘಟನೆಯಿಂದ ಆರು ದ್ವಿಚಕ್ರ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಇತರ ಏಳು ವಾಹನಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿವೆ. ಕಾರಿನ ಚಾಲಕ ಮದ್ಯಪಾನ ಮಾಡಿ ಕವಾಹನ ಚಲಾಯಿಸಿದ್ದೆ ಈ ದುರ್ಘಟನೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ದಕ್ಷಿಣ ಟ್ರಾಫೀಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.