ವ್ಯಸನಮುಕ್ತ ಕೇಂದ್ರಕ್ಕೆ ಸೇರಿದ ವ್ಯಕ್ತಿಯ ಹೊಟ್ಟೆಯೊಳಗಿತ್ತು 29 ಸ್ಟೀಲ್‌ ಚಮಚಗಳು, 19 ಟೂತ್‌ ಬ್ರಷ್‌ಗಳು, 2 ಪೆನ್‌…!

A B Dharwadkar
ವ್ಯಸನಮುಕ್ತ ಕೇಂದ್ರಕ್ಕೆ ಸೇರಿದ ವ್ಯಕ್ತಿಯ ಹೊಟ್ಟೆಯೊಳಗಿತ್ತು 29 ಸ್ಟೀಲ್‌ ಚಮಚಗಳು, 19 ಟೂತ್‌ ಬ್ರಷ್‌ಗಳು, 2 ಪೆನ್‌…!

ನವದೆಹಲಿ: ಅಸಮಾಮಾನ್ಯ ಘಟನೆಯೊಂದರಲ್ಲಿ ಉತ್ತರ ಪ್ರದೇಶದ ಘಾಜಿಯಾಬಾದ್‌ನ ವ್ಯಸನಮುಕ್ತ ಕೇಂದ್ರದಲ್ಲಿ ರೋಗಿಯೊಬ್ಬ ತನ್ನ ವಿಚಿತ್ರ ವರ್ತನೆಯಿಂದ ವೈದ್ಯರು ಮತ್ತು ಸಿಬ್ಬಂದಿಯ ಅಚ್ಚರಿಗೆ ಕಾರಣನಾಗಿದ್ದಾನೆ. ವೈದ್ಯರಿಗೆ ಆಸ್ಪತ್ರೆಯಲ್ಲಿ ಆತನ ಹೊಟ್ಟೆಯೊಳಗೆ 29 ಉಕ್ಕಿನ ಚಮಚಗಳು, 19 ಟೂತ್‌ಬ್ರಷ್‌ಗಳು ಮತ್ತು 2 ಪೆನ್‌ಗಳನ್ನು ಪತ್ತೆಯಾಗಿವೆ ಎಂದು ವರದಿಯಾಗಿದೆ.
35 ವರ್ಷದ ಸಚ್ಚಿನ್‌ ಎಂಬಾತನು ಉತ್ತರಪ್ರದೇಶದ ಹಾಪುರದ ನಿವಾಸಿಯಾಗಿದ್ದು, ಈತನ ಕುಟುಂಬವು ಈತನನ್ನು ವ್ಯಸನಮುಕ್ತ ಕೇಂದ್ರಕ್ಕೆ ದಾಖಲಿಸಿತ್ತು. ಆದರೆ, ಕೇಂದ್ರದಲ್ಲಿ ನೀಡುವ ಆಹಾರ ಕಡಿಮೆಯಾಯಿತು ಮತ್ತು ಕುಟುಂಬದಿಂದ ಬಂದ ಆಹಾರವೂ ತನಗೆ ತಲುಪದ ಕಾರಣ ಈ ವ್ಯಕ್ತಿ ಕೋಪಗೊಂಡಿದ್ದ. “ಇಡೀ ದಿನಕ್ಕೆ 2-3 ಚಪಾತಿ, ಸ್ವಲ್ಪ ತರಕಾರಿ ಮಾತ್ರ ಕೊಡುತ್ತಿದ್ದರು. ಮನೆಯಿಂದ ಏನಾದರೂ ಬಂದರೂ, ಅದು ನಮಗೆ ತಲುಪುತ್ತಿರಲಿಲ್ಲ. ಕೆಲವೊಮ್ಮೆ ಒಂದು ಬಿಸ್ಕಟ್‌ ಸಿಗುವುದು ಸಹ ಕಷ್ಟವಾಗುತ್ತಿತ್ತು,” ಎಂದು ಸಚ್ಚಿನ್ ಹೇಳಿದ್ದಾನೆ.

ಕೋಪದಿಂದ ಬಳಲುತ್ತಿದ್ದ ಸಚ್ಚಿನ್ ಅಡುಗೆ ಮನೆಯಿಂದ ಸ್ಟೀಲಿನ ಚಮಚಗಳನ್ನು ಕದ್ದುಕೊಂಡು, ಸ್ನಾನದ ಮನೆಗೆ ಹೋಗಿ ಮುರಿದು ತಿನ್ನುತ್ತಿದ್ದ. ಅದಿ ಸರಿಯಾಗಿ ಹೊಟ್ಟೆಯೊಳಗೆ ಹೋಗದಿದ್ದರೆ ಕೆಲವೊಮ್ಮೆ ಅದನ್ನು ತಿಂದ ನಂತರ ನೀರು ಕುಡಿದು ಅದು ಹೊಟ್ಟೆಯೊಳಗೆ ಹೋಗುವಂತೆ ಮಾಡುತ್ತಿದ್ದ ಎಂದು ಹೇಳಲಾಗಿದೆ.
ಕೆಲ ದಿನಗಳ ನಂತರ ಈತ ತೀವ್ರ ಹೊಟ್ಟೆ ನೋವಿನಿಂದ ಬಳಲಿದ ನಂತರ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಎಕ್ಸ್‌ರೇ ಹಾಗೂ ಸಿಟಿ ಸ್ಕ್ಯಾನ್‌ ಮಾಡಿದ ನಂತರ ವೈದ್ಯರೇ ಬೆಚ್ಚಿಬಿದ್ದರು. ಯಾಕೆಂದರೆ ಈತನ ಹೊಟ್ಟೆಯೊಳಗೆ ಚಮಚಗಳು, ಟೂತ್‌ಬ್ರಷ್‌ಗಳು ಮತ್ತು ಪೆನ್‌ಗಳು ಇರುವ ವಿಷಯ ಬೆಳಕಿಗೆ ಬಂತು. ಎಂಡೋಸ್ಕೋಪಿ ಮೂಲಕ ಅವುಗಳನ್ನು ತೆಗೆಯಲು ಯತ್ನಿಸಲಾಯಿತಾದರೂ, ಅವುಗಳ ಪ್ರಮಾಣ ಹೆಚ್ಚಾಗಿದ್ದರಿಂದ ಶಸ್ತ್ರಚಿಕಿತ್ಸೆ ಅನಿವಾರ್ಯವಾಯಿತು. ಬ
“ಇಂತಹ ಪ್ರಕರಣಗಳು ಸಾಮಾನ್ಯವಾಗಿ ಮಾನಸಿಕ ಸಮಸ್ಯೆ ಹೊಂದಿರುವವರಲ್ಲಿ ಕಂಡುಬರುತ್ತವೆ,” ಎಂದು ಶಸ್ತ್ರಚಿಕಿತ್ಸೆ ನಡೆಸಿದ ಆಸ್ಪತ್ರೆಯ ವೈದ್ಯ ಡಾ. ಶ್ಯಾಮಕುಮಾರ ತಿಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.