ಸಂಚಾರ ದಂಡ ಪಾವತಿಗೆ ಶೇಕಡಾ 50 ರಷ್ಟು ರಿಯಾಯಿತಿ

A B Dharwadkar
ಸಂಚಾರ ದಂಡ ಪಾವತಿಗೆ ಶೇಕಡಾ 50 ರಷ್ಟು ರಿಯಾಯಿತಿ

ಬೆಳಗಾವಿ:ನಗರ ಪೊಲೀಸ್ ಆಯುಕ್ತರ ಕಚೇರಿ ಸಂಚಾರ ದಂಡ ಪಾವತಿಗೆ 50% ರಿಯಾಯತಿ ನೀಡಿದೆ. ಇದರ ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ.

ದಿನಾಂಕ: 20.11.2025 ರ ಆದೇಶದ ಮೂಲಕ, ಪೊಲೀಸ್ ಇಲಾಖೆಯಿಂದ ಟ್ರಾಫಿಕ್ ಇ-ಚಲನ್ ಅಡಿಯಲ್ಲಿ ನೋಂದಾಯಿಸಲಾದ ಹಾಗೂ ಪಾವತಿಸದೇ ಬಾಕಿ ಇರುವ ಪ್ರಕರಣಗಳಲ್ಲಿ ದಂಡದ ಮೇಲೆ 50% ರಿಯಾಯಿತಿಯನ್ನು ನೀಡುವ ಆದೇಶವನ್ನು ಸರಕಾರ ಹೊರಡಿಸಿದೆ. ಈ ಆದೇಶವು 21.11.2025 ರಿಂದ 12.12.2025 ರವರೆಗೆ ಜಾರಿಯಲ್ಲಿರುತ್ತದೆ. ಕಾರಣ ಬೆಳಗಾವಿ ನಗರದ ಸಾರ್ವಜನಿಕರು ನಿಮ್ಮ ವಾಹನದ ಮೇಲೆ ಬಾಕಿ ಇರುವ ದಂಡದ ಮೊತ್ತದ 50% ದಂಡವನ್ನು ಪಾವತಿಸುವ ಮೂಲಕ ಇತ್ಯರ್ಥಪಡಿಸಬಹುದು.

ಬಾಕಿ ಇರುವ ದಂಡದ ಮೊತ್ತ ಪಾವತಿಸುವ ಸ್ಥಳ 1. ನಿಮ್ಮ ಹತ್ತಿರದ ಸಂಚಾರ ಪೊಲೀಸ್ ಠಾಣೆಯಲ್ಲಿ ಬಾಕಿ ದಂಡವನ್ನು ಪಾವತಿಸಬಹುದು.
2. ಪೊಲೀಸ್ ಆಯುಕ್ತರ ಕಛೇರಿ, (ರಿಶೆಷ್ಠನ್ ಡೆಸ್ಕ್ ನಲ್ಲಿರುವ ಪೊಲೀಸ್ ಅಧಿಕಾರಿಗಳ ಬಳಿಗೆ) ಪಾವತಿ ಮಾಡಬಹುದು.
3. ಕರ್ನಾಟಕ ಒನ್ / ಬೆಳಗಾವಿ ಒನ್ ಕೇಂದ್ರಗಳಲ್ಲಿ ಪಾವತಿ ಮಾಡಬಹುದು.

ಕೇಂದ್ರಗಳ ವಿಳಾಸ :

1. ಅಶೋಕ ನಗರ,

2. ದೂರದರ್ಶನ ನಗರ (ಟಿ.ವಿ ಸೆಂಟರ್)

3. ರಿಸಾಲ್ದಾರಗಲ್ಲಿ ಗಲ್ಲಿ, (ಹಳೇ ಕಾರ್ಪೋರೇಶನ್ ಬಿಲ್ಡಿಂಗ್)

4. ಗೋವಾವೇಸ್

4. ಇದರೊಂದಿಗೆ ಸಂಚಾರ ವಿಭಾಗದ ಇ-ಚಲನ್ ಮಸೀನ್ ಹೊಂದಿರುವ ಎಎಸ್‌ಐ ಹಾಗೂ ಮೇಲ್ಪಟ್ಟ ಅಧಿಕಾರಿಗಳ ಬಳಿ ದಂಡ ಪಾವತಿಸಿ ರಸೀದಿ ಪಡೆದುಕೊಳ್ಳಬಹುದಾಗಿದೆ.

ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ನಗರ ಪೊಲೀಸ್ ಆಯುಕ್ತರು ಕೋರಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.