ನೇಸರಗಿ: ಬೈಲಹೊಂಗಲ ತಾಲೂಕಿನ ಬೆಳಗಾವಿ-ಬಾಗಲಕೋಟ ಮುಖ್ಯ ರಸ್ತೆಯ ಸೋಮನಟ್ಟಿ ಗ್ರಾಮದ ಬಳಿ ಮರಕ್ಕೆ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಭಾನುವಾರ ಮೃತಪಟ್ಡಿದ್ದು, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ಬೆಳಗಾವಿ ತಾಲೂಕಿನ ಕರಿಕಟ್ಟಿ ಗ್ರಾಮದ ಕಾರು ಚಾಲಕ ಸಚಿನ ಯಲ್ಲಪ್ಪ ಬೋರಿಮರದ (21) ,ಮತ್ತು ಬಾಲಕೃಷ್ಣ ಬಸಪ್ಪ ಸುಲದಾಳ (19) ಮೃತರು. ಲಕ್ಕಪ್ಪ ಯಲ್ಲಪ್ಪ ಬೋರಿಮರದ (23) ಗಾಯಗೊಂಡಿದ್ದು, ಬೆಳಗಾವಿ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಸ್ವಿಫ್ಟ್ ಡಿಸೈರ ಕಾರು ಯರಗಟ್ಟಿ ಕಡೆಯಿಂದ ಬೆಳಗಾವಿ ಕಡೆ ಬರುವಾಗ ಸೋಮನಟ್ಟಿ ಗ್ರಾಮದ ಬಳಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಡಿ ವೈ ಎಸ್ ಪಿ ಡಾ.ವೀರಯ್ಯ ಹಿರೇಮಠ, ಪಿ ಐ ಗಜಾನನ ನಾಯ್ಕ, ಪಿ ಎಸ್ ಐ ಈರಪ್ಪ ರಿತ್ತಿ ಭೇಟಿ ನೀಡಿದರು. ಗಾಯಳುಗಳನ್ನು ಆಸ್ಪತ್ರೆ ಗೆ ಸಾಗಿಸುವಲ್ಲಿ ಪೊಲೀಸರು ಹಾಗೂ ಗ್ರಾಮಸ್ಥರು ನೆರವಾದರು.
ನೇಸರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

