ಹಾವೇರಿ: ಬೈಕ್ ಮತ್ತು ಟಿಪ್ಪರ್ ನಡುವೆ ಭೀಕರ ರಸ್ತೆ ಅಪಘಾತ ನಡೆದು, ಬೈಕ್ ಸವಾನದ ದೇಹ ಟಿಪ್ಪರ್ ಟೈರ್ ಗೆ ಛಿದ್ರ-ಛಿದ್ರವಾಗಿರುವ ಘಟನೆ ಜಿಲ್ಲೆಯ ಅಕ್ಕಿಆಲೂರು ಬಳಿಯ ಕಲ್ಲಾಪುರ ಕ್ರಾಸ್ ಬಳಿ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಅಕ್ಕಿಹೊಳಿ ಗ್ರಾಮದ ನಿವಾಸಿ ಹನುಮಂತಪ್ಪ ಬಿದರಿಕೊಪ್ಪ (23) ಎಂದು ಗುರುತಿಸಲಾಗಿದೆ.
ಬೈಕ್ ನಲ್ಲಿ ಸ್ವಗ್ರಾಮ ಅಕ್ಕಿಹೊಳಿಯಿಂದ ಹನುಮಂತಪ್ಪ ಹಾವೇರಿ ಕಡೆಗೆ ಹೊರಟಿದ್ದ. ಟಿಪ್ಪರ್ ಹಾವೇರಿ ಕಡೆಯಿಂದ ನಾಲ್ಕರ ಕ್ರಾಸ್ ಕಡೆಗೆ ಹೊರಟಿತ್ತು. ಈ ವೇಳೆ ಬೈಕ್ ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಟೈರ್ ಅಡಿ ಸಿಲುಕಿ ಮೃತಪಟ್ಟಿದ್ದಾನೆ. ಈ ಕುರಿತು ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.



