ಬೆಳಗಾವಿ : ಹಾಡಹಗಲೇ ಬೆಳಗಾವಿ ನಗರದಲ್ಲಿ ಯುವಕನಿಗೆ ಚಾಕು ಇರಿದ ದುಷ್ಕರ್ಮಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಒಂದು ತಿಂಗಳ ಹಿಂದಷ್ಟೆ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಮುಜಾಮ್ಮಿಲ್ ಎಂಬಾತ 18 ವರ್ಷದ ಯುವಕ ಜುಶಾನ್ ಚಾವುಸ್ ಎಂಬುವವನಿಗೆ ಚಾಕು ಇರಿದಿದ್ದಾನೆ. ಬೆಳಗಾವಿಯ ನ್ಯೂ ಗಾಂಧಿನಗರದ ಮಸೀದಿ ಬಳಿ ಘಟನೆ ನಡೆದಿದೆ.
ಗಂಭೀರವಾಗಿ ಹಲ್ಲೆಗೊಳಗಾದ ಜುಶಾನ್ ನನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಾರಿಯಾಗಿದ್ದ ಆರೋಪಿ ಮುಜಾಮ್ಮಿಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮಾಳಮಾರುತಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



