ಮಂಗಳೂರು : ಮ್ಯಾಟ್ರಿಮೋನಿ ವೆಬ್ ಸೈಟ್ ಮೂಲಕ ಪರಿಚಯ ಮಾಡಿಕೊಂಡು 9 ಯುವತಿಯರಿಗೆ ವಂಚಿಸಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಆಸಾಮಿ. ಸಾಲದ್ದಕ್ಕೆ ಆತನ ನಕಲಿ ಮಾವನಾಗಿ ಗುರುತಿಸಿಕೊಂಡು ನೆರವಾಗಿದ್ದ ಮತ್ತೊಬ್ಬ ವ್ಯಕ್ತಿ. ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಮ್ಯಾಟ್ರಿಮೋನಿಯಲ್ಲಿ ವರ ಹುಡುಕುತ್ತಿದ್ದ ಯುವತಿಯರೇ ಇವರ ಟಾರ್ಗೆಟ್. ಬಂಧಿತನನ್ನು ಸುಶಾಂತ್ ಪೂಜಾರಿ ಎಂದು ಗುರುತಿಸಲಾಗಿದೆ. ಈತನ ವಂಚನೆಗೆ ಸಾಥ್ ನೀಡಿದ್ದ ಮುಲ್ಕಿ ನಿವಾಸಿ ಭಾಸ್ಕರ್‌ನನ್ನೂ ಬಂಧಿಸಲಾಗಿದೆ.
ಸುಶಾಂತ್ ಮೆಟ್ರಿಮೊನಿಯಲ್ಲಿ ರಿಜಿಸ್ಟರ್ ಆಗಿದ್ದ ಇಬ್ಬರು ಯುವತಿಯರನ್ನು ಪರಸ್ಪರರಿಗೆ ತಿಳಿಯದಂತೆ ವಿವಾಹವಾಗಿದ್ದ, ಹಾಗೆಯೇ ಇನ್ನೂ 9 ಯುವತಿಯರಿಗೆ ಮೆಟ್ರಿಮೊನಿ ಮೂಲಕ ವಿವಾಹವಾಗುವ ಕುರಿತು ತನ್ನ ಸಮ್ಮತಿಸಿದ್ದ ಎಂದು ಪ್ರಕರಣ ತನಿಖೆ ಮಾಡುತ್ತಿರುವ ಪೊಲೀಸರು ತಿಳಿಸಿದ್ದಾರೆ.
ಸುಶಾಂತ್ ತನ್ನ ಅಳಿಯ ಎಂದು ಹೇಳಿ ಸಂತ್ರಸ್ತೆಯ ಕುಟುಂಬದವರಿಗೆ ನಂಬಿಕೆ ಮೂಡಿಸಲು ಭಾಸ್ಕರ್ ಧಾರ್ಮಿಕ ವಿಧಿವಿಧಾನಗಳಲ್ಲೂ ಭಾಗವಹಿಸಿದ್ದಾನೆ.



