
ಬೆಳಗಾವಿ : ಕಿತ್ತೂರು ರಾಣಿ ಚನ್ನಮ್ಮ ಜ್ಯೋತಿ ಸೋಮವಾರದಂದು ಬೆಳಗಾವಿಯ ಆಟೋ ನಗರ, ಬಸವೇಶ್ವರ ಬಡಾವಣೆ, ರಾಣಿ ಚನ್ನಮ್ಮ ಸರ್ಕಲ್ ರಾಮತೀರ್ಥ ನಗರ ಭಾಗಗಳಲ್ಲಿ ಸಂಚರಿಸಿತು.
ನಗರ ಸೇವಕ ಹನುಮಂತ ಕೊಂಗಾಲಿ, ಕಿತ್ತೂರು ರಾಣಿ ಚನ್ನಮ್ಮ ಅವರ ವಂಶಸ್ಥರಾದ ಅಶೋಕ ದೇಸಾಯಿ, ಸಂತೋಷ ದೇಸಾಯಿ, ಹಿರಿಯರಾದ ನಿರುಪಾದಯ್ಯ ಕಲ್ಲೊಳಿಮಠ, ಮುಖ್ತಾರ ಪಠಾಣ, ಅಪ್ಪಾಸಾಹೇಬ ಕಾಂಬಳೆ, ಸಿ.ಕೆ. ಜೋರಾಪುರ, ಮಹಾಂತೇಶ ವಕ್ಕುಂದ, ಈರಯ್ಯ ಖೋತ, ಸುರೇಶ ಯಾದವ, ಬಸವರಾಜ ವರ್ಜಣ್ಣವರ, ಆನಂದ ಕರಲಿಂಗನ್ನವರ, ಬಡಾವಣೆ ಅನೇಕ ಹಿರಿಯರು ಭಾಗವಹಿಸಿದ್ದರು. ಮಕ್ಕಳು ಹಾಗೂ ಸಹೋದರಿಯರು ಪಾಲ್ಗೊಂಡಿದ್ದರು.
ರಾಮತೀರ್ಥ ನಗರಕ್ಕೆ ಚನ್ನಮ್ಮ ಜ್ಯೋತಿ ಆಗಮನ : ನಾಗರಿಕರಿಂದ ಅಭೂತಪೂರ್ವ ಸ್ವಾಗತ

