ಬೆಳಗಾವಿ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ಬೆಳಗಾವಿ-ಮೀರಜ್ ನಡುವೆ ಪ್ರತಿದಿನ ಸಂಚರಿಸುತ್ತಿದ್ದ ವಿಶೇಷ ಎಕ್ಸ್ ಪ್ರೆಸ್ ಪ್ಯಾಸೆಂಜರ್ ರೈಲನ್ನು ಪ್ಯಾಸೆಂಜರ್ ರೈಲಾಗಿ ಬದಲಾವಣೆ ಮಾಡಿ ಕೇಂದ್ರ ರೈಲ್ವೆ ಮಂಡಳಿ ಆದೇಶಿಸಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಗುರುವಾರ ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಕರೋನಾ ಸಂದರ್ಭದಲ್ಲಿ ಬೆಳಗಾವಿ- ಮಿರಜ್ ಪ್ಯಾಸೆಂಜರ್ ರೈಲು ಸಂಚಾರವನ್ನು ನಿಲ್ಲಿಸಲಾಗಿತ್ತು. ನನ್ನ ಪ್ರಯತ್ನ ಫಲವಾಗಿ ಕಳೆದ ಎರಡು ವರ್ಷದಿಂದ ವಿಶೇಷ ಎಕ್ಸ್ ಪ್ರೆಸ್ ಪ್ಯಾಸೆಂಜರ್ ರೈಲು ಸಂಚರಿಸುತ್ತಿದೆ. ಈಗ ಪ್ರತಿದಿನ ಪ್ಯಾಸೆಂಜರ್ ರೈಲಾಗಿ ಸಂಚರಿಸಲಿದೆ. ಇದರಿಂದ ಟಿಕೆಟ್ ಬೆಲೆ ಕಡಿತಗೊಂಡು, ಉದ್ಯೋಗಿಗಳು, ಕಾರ್ಮಿಕರು, ವಿದ್ಯಾರ್ಥಿಗಳು, ವೈದ್ಯಕೀಯ ಚಿಕಿತ್ಸೆಗಾಗಿ ಬರುವವರಿಗೆ ಅನುಕೂಲಕರವಾಗಲಿದೆ ಎಂದರು.
ರೈಲಿನ ಸಮಯ ಬೆಳಗ್ಗೆ 05.45 ಕ್ಕೆ ಬೆಳಗಾವಿಯಿಂದ ಹೊರಟು ಮುಂಜಾನೆ 09.00 ಗಂಟೆಗೆ ಮಿರಜ್ ತಲುಪಲಿದೆ. ಮಿರಜ್ ನಿಂದ ಮು.09.55 ಕ್ಕೆ ಹೊರಟು ಮಧ್ಯಾಹ್ನ 01.00 ಗಂಟೆಗೆ ಬೆಳಗಾವಿಗೆ ತಲುಪಲಿದೆ ಮತ್ತು ಮಧ್ಯಾಹ್ನ 01.30 ಕ್ಕೆ ಬೆಳಗಾವಿಯಿಂದ ಹೊರಟು ಸಂಜೆ 04.30 ಗಂಟೆಗೆ ಮಿರಜ್ ತಲುಪಲಿದೆ. ಮಿರಜ್ ನಿಂದ ರಾತ್ರಿ 07.10 ಕ್ಕೆ ಹೊರಟು ರಾತ್ರಿ 10.25 ಗಂಟೆಗೆ ಬೆಳಗಾವಿಗೆ ತಲುಪಲಿದೆ. ಪ್ರತಿದಿನ ಎರಡು ಟ್ರಿಪ್ ಸಂಚರಿಸಲಿದೆ ಎಂದರು.
ನನ್ನ ಮನವಿಗೆ ಸ್ಪಂದಿಸಿ, ಬೆಳಗಾವಿ-ಮೀರಜ್ ಪ್ಯಾಸೆಂಜರ್ ರೈಲಾಗಿ ಆದೇಶ ನೀಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ, ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಹಾಗೂ ನೈರುತ್ಯ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಈ ಭಾಗದ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಗುವುದು ಎಂದು ಸಂಸದ ಈರಣ್ಣ ಕಡಾಡಿ ಹೇಳಿದ್ದಾರೆ.

