ಬೆಳಗಾವಿ: ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ತೆರಿಗೆ, ಸುಂಕ ತಪ್ಪಿಸಿ ಪೆಟ್ರೋಲಿಯಂ ಉತ್ಪನಗಳನ್ನು ಅಕ್ರಮವಾಗಿ ಸಾಗಟ ಮಾಡುತ್ತಿದ್ದ ತಂಡವನ್ನು ಬೆಳಗಾವಿ ಪೊಲೀಸರು ಭೇದಿಸಿದ್ದಾರೆ.
ಮುಂಬೈನಿಂದ ಬೆಳಗಾವಿ ಮಾರ್ಗವಾಗಿ ಬೆಂಗಳೂರಿಗೆ ಟ್ಯಾಂಕರ್‌ನಲ್ಲಿ ಡೀಸೆಲ್ ಟ್ಯಾಂಕರೋಂದನ್ನು ಮಾಳಮಾರುತಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 17 ಲಕ್ಷ ಮೌಲ್ಯದ 17,000 ಲೀಟರ್ ಡೀಸೆಲನ್ನು ಸಾಗಿಸಲಾಗುತ್ತಿತ್ತು. ಇದು ಯಾರಿಗೆ ಯಾರಿಂದ ಸಾಗಿಸಲಾಗುತ್ತಿತ್ತು ಎಂದು ತನಿಖೆ ಮಾಡಲಾಗುತ್ತಿದೆ ಎಂದು ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ ಬೋರಸೆ ತಿಳಿಸಿದ್ದಾರೆ.
ಡೀಸೆಲ್ ಸಾಗಿಸುತ್ತಿದ್ದ ಟ್ಯಾಂಕರ್ ತುಮಕೂರು ಮೂಲದ ಅರಿಹಂತ್ ಎಂಬವರಿಗೆ ಸೇರಿದ್ದು ಅವರು ಅಕ್ರಮ ವಾಹನ ತೈಲ ಸಾಗಿಸುತ್ತಿರುವ ಜಾಲದಲ್ಲಿ ಮಹಾರಾಷ್ಟ್ರ, ರಾಜಸ್ಥಾನದವರೂ ಇರುವುದಾಗಿ ಮಾಹಿತಿ ನೀಡಿದ್ದಾರೆ ಎಂದು ಬೋರಸೆ ತಿಳಿಸಿದರು.



