ಬೆಳಗಾವಿ, ಸೆ. 19- ಇಲ್ಲಿಯ ರಾಮತೀರ್ಥ ನಗರದ ಬಸವೇಶ್ವರ ಬಡಾವಣೆಯ ಶ್ರೀ ಕರೆಮ್ಮ ದೇವಿಯ 13 ನೇ ವರ್ಷದ ಜಾತ್ರಾ ಮಹೋತ್ಸವ ಸೆಪ್ಟೆಂಬರ್ 20 ರಿಂದ ನಡೆಯಲಿದೆ.
ದಿನಾಂಕ 20 ರಂದು ಸಂಜೆ 7:00 ಕ್ಕೆ ಡೊಳ್ಳಿನ ಹಾಡಿಕೆ, ದಿನಾಂಕ 21 ರಂದು ಬೆಳಗ್ಗೆ 6:30 ಕ್ಕೆ ಶ್ರೀ ಕರೆಮ್ಮ ದೇವಿಗೆ ಪ್ರಾತಃಕಾಲದಲ್ಲಿ ಅಭಿಷೇಕ, ಮಹಾಪೂಜೆ ನೆರವೇರಲಿದೆ. 9:30 ಕ್ಕೆ ದೇವಿಯ ಪಲ್ಲಕಿ ಉತ್ಸವ ಬಸವೇಶ್ವರ ಬಡಾವಣೆಯ ಎಲ್ಲಾ ಓಣಿಗಳಲ್ಲಿ ಸಂಚರಿಸಲಿದೆ. ನಂತರ ಮುತ್ತೈದೆಯರಿಂದ ಉಡಿ ತುಂಬುವ ಕಾರ್ಯಕ್ರಮ, 12:30 ಕ್ಕೆ ಮಹಾಪ್ರಸಾದ ಏರ್ಪಡಿಸಲಾಗಿದೆ.
ದಿನಾಂಕ 22 ರಿಂದ ಪ್ರತಿದಿನ ಸಂಜೆ 7 ಕ್ಕೆ ಶ್ರೀ ಶಂಕರಯ್ಯ ಸ್ವಾಮಿಗಳು ಪೂರ್ವಿಮಠ ತಹಶೀಲ್ದಾರ ಗಲ್ಲಿ, ಬೆಳಗಾವಿ ಇವರಿಂದ ಪಾರಾಯಣ, ನಂತರ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್ 2 ರಂದು ಸಂಜೆ 6:30 ಕ್ಕೆ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬನ್ನಿ ಪೂಜೆ ನೆರವೇರಲಿದೆ ಎಂದು ಜಾತ್ರಾ ಮಹೋತ್ಸವ ಕಮಿಟಿ ತಿಳಿಸಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.

