ಹಾವೇರಿಯ ಹುಕ್ಕೇರಿ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಉಪ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ.

A B Dharwadkar
ಹಾವೇರಿಯ ಹುಕ್ಕೇರಿ ಮಠಕ್ಕೆ ಭೇಟಿ ನೀಡಿ  ವಿಶೇಷ ಪೂಜೆ ಸಲ್ಲಿಸಿದ  ಉಪ ಮುಖ್ಯ ಮಂತ್ರಿ ಡಿ.ಕೆ.  ಶಿವಕುಮಾರ.

ಹಾವೇರಿ: ನಗರದ ಹುಕ್ಕೇರಿಮಠಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಬುಧವಾರ ಮಧ್ಯಾನ್ಹ ಭೇಟಿ ನೀಡಿ ಲಿಂ.ಶಿವಲಿ೦ಗ ಸ್ವಾಮೀಜಿ ಹಾಗೂ ಲಿಂ. ಶಿವಬಸವ ಸ್ವಾಮೀಜಿ ಅವರ ಕತೃ ಗದ್ದುಗೆ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಶ್ರೀ ಮಠದ ಪೂಜ್ಯ ಸದಾಶಿವ ಮಹಾ ಸ್ವಾಮೀಜಿ ಅವರ ದರ್ಶನ ಪಡೆದ ಡಿಸಿಎಂ ಡಿ.ಕೆ ಶಿವಕುಮಾರ, ಶ್ರೀಗಳ ಜತೆಗೆ ಯೋಗ ಕ್ಷೇಮ ವಿಚಾರಿಸಿ, ಇತ್ತೀಚೆಗೆ ಹಾವೇರಿಯಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮದ ಎಲ್ಲ ವಿಡಿಯೋ ಚಿತ್ರೀಕರಣವನ್ನು ಸದಾಶಿವ ಸ್ವಾಮೀಜಿ ತೋರಿಸಿದಾಗ, ವಿಡಿಯೋವನ್ನು ವೀಕ್ಷಣೆ ಮಾಡಿದರು. ಈ ನಾನು ಕೂಡ ಈ ಬಾರಿ ಜಾತ್ರಾ ಮಹೋತ್ಸವಕ್ಕೆ ಬರಬೇಕಿತ್ತು, ಕಾರಣಾಂತರಗಳಿ೦ದ ಬರಲಿಕ್ಕೆ ಆಗಲಿಲ್ಲ ಎಂದರು. ದುಶ್ಚಟಗಳ ವ್ಯಸನಮುಕ್ತ ಅಭಿಯಾನ, ಮಹಿಳೆಯರಿಂದ ಬಸವ ಬುತ್ತಿ ಮೆರವಣಿಗೆ, ೫೧ ಸಾವಿರ ಜನರಿಂದ ವಚನ ವಂದನ ಗುರುವಂದನಾ ಹೀಗೆ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿರುವ ಬಗ್ಗೆ ಮಾಹಿತಿ ತಿಳಿದುಕೊಂಡೆ. ಇಂತಹದ್ದೊ೦ದು ಅಭೂತಪೂರ್ವ ಕಾರ್ಯಕ್ರಮ ನಡೆಸಿರುವುದು ಶ್ಲಾಘನೀಯ ಕಾರ್ಯ ಎಂದರು.
ನ೦ತರ ಸದಾಶಿವ ಮಹಾಸ್ವಾಮೀಜಿ ಅವರು ಡಿ.ಕೆ ಶಿವಕುಮಾರ ಅವರಿಗೆ ಆಶೀರ್ವಾದದ ಶ್ರೀರಕ್ಷೆ ನೀಡಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಬಸವರಾಜ ಶಿವಣ್ಣನವರ, ಪ್ರಕಾಶ ಕೋಳಿವಾಡ, ಶ್ರೀನಿವಾಸ ಮಾನೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಆನಂದಸ್ವಾಮಿ ಗಡ್ಡದೇವರಮಠ, ರಾಜಣ್ಣ ಮಾಗನೂರ, ಶಿವರಾಜ ಸಜ್ಜನರ,ಸೇರಿದಂತೆ ಮಠದ ಭಕ್ತರು ಉಪಸ್ಥಿತರಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.