ಕಾಂಕ್ರೀಟ್‌ ರಸ್ತೆ ಹಾಗೂ ರೂ. 5 ಲಕ್ಷಗಳ ವೆಚ್ಚದಲ್ಲಿ ಸಮುದಾಯ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಈರಣ್ಣ ಕಡಾಡಿ

A B Dharwadkar
ಕಾಂಕ್ರೀಟ್‌ ರಸ್ತೆ ಹಾಗೂ ರೂ. 5 ಲಕ್ಷಗಳ ವೆಚ್ಚದಲ್ಲಿ ಸಮುದಾಯ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಈರಣ್ಣ ಕಡಾಡಿ

ಮೂಡಲಗಿ: ರಾಕ್ಷಸ ಸಂತತಿಯನ್ನು ನಾಶಗೊಳಿಸಿದ ಆದಿಶಕ್ತಿ ದುರ್ಗಾಮಾತೆಯ ಆರಾಧನೆ ಮತ್ತು ನಾಮ ಸ್ಮರಣೆಗೆ ಮೀಸಲಾದ ನವರಾತ್ರಿ ದಸರಾ ಹಬ್ಬದ ಆಚರಣೆಯು ಕೇವಲ ಸಾಂಕೇತಿಕವಾಗದೆ, ಮನುಷ್ಯ ತನ್ನ ಅಂತರಂಗ ಮತ್ತು ಬಹಿರಂಗ ಶುದ್ದಿಗೆ ಅತೀ ಅಗತ್ಯವಾದ ಮೌಲ್ಯಗಳ ಚಿಂತನೆ ಮತ್ತು ಅನುಪಾಲನೆಗೆ ತೆರೆದುಕೊಳ್ಳಬೇಕೆಂಬುದೇ ನವರಾತ್ರಿ ಹಬ್ಬದ ಬಹುಮುಖ್ಯ ಆಶಯವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಮಂಗಳವಾರ ಸೆ-23 ರಂದು ಮಸಗುಪ್ಪಿ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಿಂದ ಯಾದವಾಡ ಮುಖ್ಯ-ರಸ್ತೆಯವರೆಗೆ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ. 15 ಲಕ್ಷಗಳ ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆ ಹಾಗೂ ರೂ. 5 ಲಕ್ಷಗಳ ವೆಚ್ಚದಲ್ಲಿ ಸಮುದಾಯ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮಸಗುಪ್ಪಿ ಗ್ರಾಮದಲ್ಲಿ ಮಹಾಲಕ್ಷ್ಮೀ ದೇವಿಯು ಬಂದು ನೆಲೆಸಿದ್ದು ಇಡಿ ನಮ್ಮ ತಾಲೂಕಿಗೆ ಒಂದು ದೈವಭಕ್ತಿಯ ಪ್ರತೀಕವಾಗಿದೆ. ನವರಾತ್ರಿ ಹಬ್ಬ ನಮ್ಮಲ್ಲಿರುವ ಅಸೂಯೆ ಗುಣಗಳನ್ನು ಶಮನಗೊಳಿಸಿ ದೈವಿ ಗುಣಧರ್ಮ ಬರುವ ಹಾಗೆ ಮಾಡುವ ಅಪರೂಪದ ಹಬ್ಬವಾಗಿದೆ ಎಂದರು.

ಈ ಮುಂಚೆ ಗ್ರಾಮದಲ್ಲಿರುವ ಮಹಾಲಕ್ಷ್ಮೀ ಪ್ರೌಢ ಶಾಲೆ ಕೊಠಡಿ ನಿರ್ಮಾಣಕ್ಕೆ ₹10 ಲಕ್ಷ ನೀಡಲಾಗಿದೆ. ಮುಂಬರುವ ದಿನದಲ್ಲಿ ಗ್ರಾಮದ ಯುವಕರಿಗೆ ವ್ಯಾಯಾಮ ಮಾಡಲು ಓಪನ್ ಜಿಮ್‌ನ್ನು ನೀಡುತ್ತಿದ್ದೇನೆ ಮತ್ತು ಗ್ರಾಮದ ಅಭಿವೃದ್ದಿ ಕಾರ್ಯಗಳಿಗೆ ನನ್ನ ಸಹಕಾರ ಇದ್ದೇ ಇರುತ್ತದೆ ಗ್ರಾಮಸ್ಥರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಬಸವರಾಜ ಭುಜನ್ನವರ, ಭರಮಪ್ಪ ಗಂಗಣ್ಣವರ, ಭರಮಪ್ಪ ಆಶಿರೊಟ್ಟಿ, ಬಸವರಾಜ ಕಡಾಡಿ, ಸಂಜು ಹೋಸಕೊಟೆ, ರಾಮಣ್ಣ ಗಂಗಣ್ಣವರ, ಸಾತಪ್ಪ ಕೊಳದುರ್ಗಿ, ಲಕ್ಷ್ಮಣ ನರಗುಂದ, ಕೆಂಚಪ್ಪ ಸಿಂತ್ರಿ, ನಿಂಗಪ್ಪ ಯಕ್ಕುಂಡಿ, ಪ್ರಕಾಶ ಗೊಂದಿ, ಬಸವರಾಜ ಗಾಡವಿ, ಈಶ್ವರ ಗಾಡವಿ, ನಿಂಗಪ್ಪಾ ತೋಳಿ, ಲಕ್ಕಪ್ಪ ಮಕರದ, ವಿರೂಪಾಕ್ಷ ಕೊಳವಿ, ಹಣಮಂತ ಕುಲಕರ್ಣಿ, ಕೃಷ್ಣಾ ಆಶಿರೊಟ್ಟಿ, ಲಕ್ಷ್ಮಣ ಗುಡಪ್ಪಗೋಳ, ಲಕ್ಕಪ್ಪ ಪೂಜೇರಿ, ಕಲ್ಲೋಳೆಪ್ಪ ಆಶಿರೊಟ್ಟಿ, ಅಶೋಕ ಮಳಲಿ, ಶ್ರೀಕಾಂತ ಕೌಜಲಗಿ, ಶ್ರೀಶೈಲ ಪೂಜೇರಿ, ಈರಪ್ಪ ಡವಳೇಶ್ವರ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.