ಸಿನಿಮಾ ಪ್ರಿಯರಿಗೆ ಕೊನೆಗೂ ಸಿಹಿಸುದ್ದಿ : ಏಕರೂಪದ ದರ ನಿಗದಿ

A B Dharwadkar
ಸಿನಿಮಾ ಪ್ರಿಯರಿಗೆ ಕೊನೆಗೂ ಸಿಹಿಸುದ್ದಿ : ಏಕರೂಪದ ದರ ನಿಗದಿ

ಬೆಂಗಳೂರು : ಸಿನಿಮಾ ಪ್ರಿಯರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಚಿತ್ರಮಂದಿರಗಳಲ್ಲಿ 200 ರೂ.ಟಿಕೆಟ್ ಗೆ ಅನುಮೋದನೆ ನೀಡಿದೆ. ಈ ಕುರಿತು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಮಾಡಿದ್ದು, ರಾಜ್ಯದಲ್ಲಿರುವ ಎಲ್ಲಾ ಮಲ್ಟಿಫ್ಲೆಕ್ಸ್ ಗಳು ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೂಪದ ದರ ಜಾರಿಗೊಳಿಸಿ ಆದೇಶಿಸಿದೆ. ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೂಪದ ದರ ಜಾರಿಗೊಳಿಸಲಾಗಿದೆ. ರೂ.200 ಮೀರದಂತೆ ಆದೇಶ ಹೊರಡಿಸಿದೆ. ಎಲ್ಲಾ ಭಾಷೆಯ ಸಿನಿಮಾಗಳಿಗೂ ಏಕರೂಪದ ದರವನ್ನು ಜಾರಿಗೊಳಿಸಲಾಗಿದೆ.

ರಾಜ್ಯದಲ್ಲಿ ಮಲ್ಟಿಪ್ಲೆಕ್ಸ್ ಗಳು ಸೇರಿ ಎಲ್ಲ
ಚಿತ್ರ ಮಂದಿರಗಳಲ್ಲಿ ಚಲನಚಿತ್ರಗಳ ಟಿಕೆಟ್ ದರವನ್ನು (ತೆರಿಗೆ ಬಿಟ್ಟು) ಗರಿಷ್ಠ ₹200ಕ್ಕೆ ನಿಗದಿಪಡಿಸಿದೆ.

ಈ ನಿಯಮ ಶುಕ್ರವಾರದಿಂದಲೇ ಜಾರಿಗೆ ಬಂದಿದೆ. ಕನ್ನಡ ಸೇರಿ ಎಲ್ಲ ಭಾಷೆಗಳ ಚಲನಚಿತ್ರಗಳಿಗೂ ಈ ಆದೇಶ ಅನ್ವಯವಾಗಲಿದೆ. ಆದರೆ, 75 ಅಥವಾ ಅದಕ್ಕಿಂತ ಕಡಿಮೆ ಆಸನಗಳನ್ನು ಹೊಂದಿರುವ ಪ್ರೀಮಿಯಂ ಸೌಲಭ್ಯಗಳನ್ನು ಒಳಗೊಂಡ ಮಲ್ಟಿಪ್ಲೆಕ್ಸ್‌ಗಳಿಗೆ ಈ ನಿಯಮದಿಂದ ವಿನಾಯ್ತಿ ನೀಡಲಾಗಿದೆ.

ಯಾವುದೇ ಭಾಷೆಯ ಚಿತ್ರವಾದರೂ ಸರಿ ಗರಿಷ್ಠ ದರ ₹200 ದಾಟುವಂತಿಲ್ಲ. ಟಿಕೆಟ್ ಮೇಲೆ ಶೇ 18ರಷ್ಟು ತೆರಿಗೆ ಇರುತ್ತದೆ. ಚಿತ್ರಮಂದಿರದಲ್ಲಿ ಎರಡು ಅಥವಾ ಮೂರು ಕ್ಲಾಸ್‌ಗಳ ಆಸನ ವ್ಯವಸ್ಥೆ ಇದ್ದರೆ ಅವುಗಳ ಬೆಲೆಯೂ ₹150 ಕ್ಕಿಂತ ಕಡಿಮೆ ಆಗಲಿದೆ.

ಮಲ್ಟಿಪ್ಲೆಕ್ಸ್‌ಗಳಲ್ಲಿ ಪರಭಾಷಾ ಚಿತ್ರಗಳ ಟಿಕೆಟ್ ದರದ ಮೇಲೆ ಯಾವುದೇ ನಿಯಂತ್ರಣವಿರಲಿಲ್ಲ. ಕೆಲವು ಚಿತ್ರಗಳ ಟಿಕೆಟ್ ದರ ₹2,000-₹3000 ದಾಟುತ್ತಿತ್ತು. ತಮಿಳುನಾಡು ಮಾದರಿಯಲ್ಲೇ ಕರ್ನಾಟಕದಲ್ಲೂ ಟಿಕೆಟ್ ದರವನ್ನು ನಿಗದಿ ಮಾಡಬೇಕು ಎಂಬುದು ಕನ್ನಡ ಚಲನಚಿತ್ರ ರಂಗದ ಬಹುದಿನಗಳ ಬೇಡಿಕೆಯಾಗಿತ್ತು. ರಾಜೇಂದ್ರ ಸಿಂಗ್ ಬಾಬು ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದಾಗ, ಸರ್ಕಾರಕ್ಕೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಂದಿನ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಕೈಜೋಡಿಸಿದ್ದರು.

‘ಏಳು ವರ್ಷಗಳ ನಮ್ಮ ಹೋರಾಟ ಈಗ ಫಲ ನೀಡಿದೆ’
ಎಂದು ರಾಜೇಂದ್ರ ಸಿಂಗ್ ಬಾಬು ಪ್ರತಿಕ್ರಿಯಿಸಿದರು.

ಈ ಕುರಿತು ಮಾತನಾಡಿದ ರಾಜೇಂದ್ರಸಿಂಗ್ ಬಾಬು ಅವರು, ಈ ಹಿಂದೆಯೇ ಆದೇಶ ಆಗಿತ್ತು. ಆದರೆ, ಆಗ ಸರ್ಕಾರದಲ್ಲಿ ಕೆಲವರು ಅದಕ್ಕೆ ಹಿನ್ನಡೆ ಉಂಟು ಮಾಡಿದರು. ಅದರ ಪರಿಣಾಮ, ಆ ಆದೇಶದ ವಿರುದ್ಧ ನ್ಯಾಯಾಲಯದಿಂದ ತಡೆ ತರಲಾಯಿತು. ಕೋಟಿಗಟ್ಟಲೆ ಹಣ ಕೊಟ್ಟು ಪರ ಭಾಷಾ ಚಿತ್ರಗಳನ್ನು ಇಲ್ಲಿಗೆ ತಂದು ಕನ್ನಡಿಗರ ಹಣ ಲೂಟಿ ಮಾಡುತ್ತಿದ್ದರು. ಈಗ ಅದಕ್ಕೆ ಕಡಿವಾಣ ಬೀಳಲಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಸಾಮಾನ್ಯ ಜನರೂ ಚಲನಚಿತ್ರಗಳನ್ನು ನೋಡಬಹುದಾಗಿದೆ’ ಎಂದರು.

‘ತಮಿಳುನಾಡು, ಆಂಧ್ರದಲ್ಲೂ ಟಿಕೆಟ್ ದರ ಕಡಿಮೆ ಇದೆ. ಅಲ್ಲಿ ತೆರಿಗೆಯೂ ಸೇರಿ ಟಿಕೆಟ್ ದರ ₹150ರಿಂದ ₹200ರ ಒಳಗೆ ಇದೆ. ಕರ್ನಾಟಕದಲ್ಲಿ ಮಾತ್ರ ಅತ್ಯಂತ ದುಬಾರಿ ಆಗಿತ್ತು. ಇದರಿಂದ ಕನ್ನಡ ಚಿತ್ರಗಳ ಮೇಲೂ ಪರಿಣಾಮ ಬೀರಿತ್ತು. ಹೊಸ ಅಧಿಸೂಚನೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.