ಬೆಳಗಾವಿಯಲ್ಲಿ ರಾಜ್ಯೋತ್ಸವ ಮೆರವಣಿಗೆಗೆ ನುಗ್ಗಿ ಮನಬಂದಂತೆ ಇರಿದ ದುಷ್ಕರ್ಮಿಗಳು: ಐವರಿಗೆ ಗಂಭೀರ ಗಾಯ

A B Dharwadkar
ಬೆಳಗಾವಿಯಲ್ಲಿ ರಾಜ್ಯೋತ್ಸವ ಮೆರವಣಿಗೆಗೆ ನುಗ್ಗಿ ಮನಬಂದಂತೆ ಇರಿದ ದುಷ್ಕರ್ಮಿಗಳು: ಐವರಿಗೆ ಗಂಭೀರ ಗಾಯ

ಬೆಳಗಾವಿ:ನಗರದಲ್ಲಿ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆ ವೇಳೆ ದುಷ್ಕರ್ಮಿಗಳ ಗುಂಪೊಂದು ಏಕಾಏಕಿ ದಾಳಿ ಮಾಡಿ ಮನಬಂದಂತೆ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ನಡೆದಿದೆ. ಗಂಭೀರ ಗಾಯಗೊಂಡಿರುವ ಇಬ್ಬರನ್ನು ಖಾಸಗಿ ಮತ್ತು ಇತರ ಮೂವrನ್ನು ಜಿಲ್ಲಾ ಆಸ್ಪತೆಗೆ ದಾಖಲಿಸಲಾಗಿದೆ.

ಸದಾಶಿವ ನಗರದಲ್ಲಿ ರಾಜ್ಯೋತ್ಸವ ರೂಪಕಗಳ ಮೆರವಣಿಗೆ ವೇಳೆ ನುಗ್ಗಿದ ದುಷ್ಕರ್ಮಿಗಳ ಗುಂಪು ಚಾಕು- ಜಂಬೆಗಳಿಂದ ಇರಿದು ಪರಾರಿಯಾಗಿದೆ. ಇದರಲ್ಲಿ ಗಾಯಗೊಂಡ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಸದಾಶಿವ ನಗರದ ಲಕ್ಷ್ಮೀ ಕಾಂಪ್ಲೆಕ್ಸ ಬಳಿ ಭುವನೇಶ್ವರಿ ಮೂರ್ತಿ ಮೆರವಣಿಗೆ ಮಾಡುತ್ತ, ಯುವಕರ ಗುಂಪು ನೃತ್ಯ ಮಾಡುತ್ತಿತ್ತು. ಏಕಾಏಕಿ ಗುಂಪಿಗೆ ನುಗ್ಗಿದ ದುಷ್ಕರ್ಮಿಗಳು  ಜನಸಂದಣಿಯಲ್ಲೇ ಚಾಕು ಹಾಗೂ ಜಂಬೆಗಳಿಂದ ಮನಬಂದಂತೆ ಚುಚ್ಚಿದ್ದಾರೆ. ಯುವಕರು ನೆಲಕ್ಕೆ ಬಿದ್ದು ರಕ್ತಸ್ರಾವದಿಂದ ಒದ್ದಾಡುತ್ತಿದ್ದಂತೆಯೇ ಅವರು ಸ್ಥಳದಿಂದ ಪರಾರಿಯಾದರು.

ಗಾಯಗೊಂಡವರನ್ನು ನೆಹರು ನಗರದ ಗುರುನಾಥ ವಕ್ಕುಂದ, ಸಚಿನ ಕಾಂಬಳೆ, ಲೋಕೇಶ ಬೆಟಗೇರಿ, ಮಹೇಶ ಸುಂಕದ, ವಿನಾಯಕ ನರಟ್ಟಿ ಹಾಗೂ ನಜೀರ್ ಪಠಾಣ ಎಂಬುವರಿಗೆ ಗಂಭೀರ ಗಾಯಗಳಾಗಿವೆ. ತಲೆ, ಹೊಟ್ಟೆ, ಬೆನ್ನು, ಗುದದ್ವಾರ ಹೀಗೆ ದೇಹದ ವಿವಿಧ ಭಾಗಗಳಿಗೆ ಚಾಕು ಇರಿತವಾಗಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಸದಾಶಿವ ನಗರದ ಲಕ್ಷ್ಮೀ ಕಾಂಪ್ಲೆಕ್ಸ್‌ ಎದುರಿನ ವೈ ಜಂಕ್ಶನ್ ಬಳಿ ನೆಹರು ನಗರದ ಡಾಲ್ಬಿ ರೂಪಕ ವಾಹನದೊಂದಿಗೆ ಬಂದಿತ್ತು. ಆಗ ಮತ್ತೊಂದು ಗುಂಪಿನ ಯುವಕರು ಏಕಾಏಕಿ ನುಗ್ಗಿ ಜನಸಂದಣಿಯಲ್ಲೇ ಬಂದು ಜಗಳ ತೆಗೆದು ನೆಹರು ನಗರದ ಯುವಕರ ಮೇಲೆ ಚಾಕು ಹಾಗೂ ಜಂಬೆಯಿಂದ ಇರಿಯಲಾಗಿದೆ. ಯುವಕರು ನೆಲಕ್ಕೆ ಬಿದ್ದು ರಕ್ತಸ್ರಾವದಿಂದ ಒದ್ದಾಡುತ್ತಿದ್ದಂತೆಯೇ ಸ್ಥಳದಿಂದ ಪರಾರಿಯಾದರು.

ಗಾಯಗೊಂಡವರೆಲ್ಲ ನೆಹರೂ ನಗರದ ನಿವಾಸಿಗಳೆಂದು ತಿಳಿದು ಬಂದಿದೆ. ತಲೆ, ಹೊಟ್ಟೆ, ಬೆನ್ನು, ಗುದದ್ವಾರ ಹೀಗೆ ದೇಹದ ವಿವಿಧ ಭಾಗಗಳಿಗೆ ಚಾಕುಗಳಿಂದ ಏಟು ಬಿದ್ದಿವೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.