ಗದಗ : ವಧು-ವರರ ಸಮಾವೇಶ

A B Dharwadkar
ಗದಗ : ವಧು-ವರರ ಸಮಾವೇಶ

ವಿಜಯಪುರ :ಗದಗ ನಗರದ ನಿಜಶರಣ ಅಂಬಿಗರ ಚೌಡಯ್ಯನವರ ಸಮಾಜದ ವತಿಯಿಂದ ಸಮಾಜದ ಸಂಚಾಲಕ ದೇವೇಂದ್ರ ಅಂಬಿಗೇರ ಅವರು ಆಕ್ಟೋಬರ್ 12 ರ ರವಿವಾರ ರಂದು ವಧು-ವರರ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ. ವಧು-ವರ ಸಮಾವೇಶವು ಗದಗ ನಗರದ ಹುಬ್ಬಳ್ಳಿ ರಸ್ತೆಯ ಮಾರ್ಗದಲ್ಲಿರುವ ಮುಳಗುಂದ ನಾಕಾ ಹತ್ತಿರದ ಹೊಟೆಲ್ ಕ್ಲಾರ್ಕ್ಇನ್ ಸ್ಟಾರ್ ಹೋಟೆಲ್‌ನಲ್ಲಿ ನಡೆಸಲಾಗುತ್ತಿದೆ.
ಸಮಾವೇಶದಲ್ಲಿ ವಧು-ವರರ ಫೋಟೊ ಮೂಲಕ ಇಮೇಜ್ ಹಾಗೂ ವೀಡಿಯೋ ಮೂಲಕ ಪ್ರದರ್ಶನ ಮಾಡಲಾಗುವುದು. ಆಕ್ಟೋಬರ್ 1ರ ವರೆಗೆ ವಧು-ವರರು ತಮ್ಮ ಹೆಸರುಗಳನ್ನು ನೋಂದಣಿ ಮಾಡಬಹುದಾಗಿದೆ. ಆಸಕ್ತ ಯುವಕ-ಯುವತಿಯರ, ನಿಜಶರಣ ಅಂಬಿಗರ ಚೌಡಯ್ಯನವರ ಸಮಾಜದ ಸಂಚಾಲಕ ದೇವೇಂದ್ರಅಂಬಿಗೇರ ಇವರ ವಾಟ್ಸ್ಆಪ್ ನಂಬರ್ 9880638799 ಇಲ್ಲಿಗೆ ತಮ್ಮ ಇತ್ತೀಚಿನ ಫೋಟೊ ಹಾಗೂ ಬಯೋಡಾಟಾವನ್ನು ಕಳುಹಿಸಿಕೊಡುವಂತೆ ಕೋರಲಾಗಿದೆ. ಸಮಾವೇಶದಲ್ಲಿ ವಧು-ವರರ ಜೊತೆಗೆ ಪಾಲಕರು ಭಾಗವಹಿಸಬಹುದಾಗಿದೆ. ವಿಜಯಪುರ ಜಿಲ್ಲೆಯಿಂದ ವಧು-ವರರು ಹಾಗೂ ಅವರೊಂದಿಗೆ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿಜಯಪುರ ಜ್ಞಾನಗಂಗಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎಸ್.ಎಂ. ಗಾಣೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.