ವಿಜಯಪುರ :ಗದಗ ನಗರದ ನಿಜಶರಣ ಅಂಬಿಗರ ಚೌಡಯ್ಯನವರ ಸಮಾಜದ ವತಿಯಿಂದ ಸಮಾಜದ ಸಂಚಾಲಕ ದೇವೇಂದ್ರ ಅಂಬಿಗೇರ ಅವರು ಆಕ್ಟೋಬರ್ 12 ರ ರವಿವಾರ ರಂದು ವಧು-ವರರ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ. ವಧು-ವರ ಸಮಾವೇಶವು ಗದಗ ನಗರದ ಹುಬ್ಬಳ್ಳಿ ರಸ್ತೆಯ ಮಾರ್ಗದಲ್ಲಿರುವ ಮುಳಗುಂದ ನಾಕಾ ಹತ್ತಿರದ ಹೊಟೆಲ್ ಕ್ಲಾರ್ಕ್ಇನ್ ಸ್ಟಾರ್ ಹೋಟೆಲ್ನಲ್ಲಿ ನಡೆಸಲಾಗುತ್ತಿದೆ.
ಸಮಾವೇಶದಲ್ಲಿ ವಧು-ವರರ ಫೋಟೊ ಮೂಲಕ ಇಮೇಜ್ ಹಾಗೂ ವೀಡಿಯೋ ಮೂಲಕ ಪ್ರದರ್ಶನ ಮಾಡಲಾಗುವುದು. ಆಕ್ಟೋಬರ್ 1ರ ವರೆಗೆ ವಧು-ವರರು ತಮ್ಮ ಹೆಸರುಗಳನ್ನು ನೋಂದಣಿ ಮಾಡಬಹುದಾಗಿದೆ. ಆಸಕ್ತ ಯುವಕ-ಯುವತಿಯರ, ನಿಜಶರಣ ಅಂಬಿಗರ ಚೌಡಯ್ಯನವರ ಸಮಾಜದ ಸಂಚಾಲಕ ದೇವೇಂದ್ರಅಂಬಿಗೇರ ಇವರ ವಾಟ್ಸ್ಆಪ್ ನಂಬರ್ 9880638799 ಇಲ್ಲಿಗೆ ತಮ್ಮ ಇತ್ತೀಚಿನ ಫೋಟೊ ಹಾಗೂ ಬಯೋಡಾಟಾವನ್ನು ಕಳುಹಿಸಿಕೊಡುವಂತೆ ಕೋರಲಾಗಿದೆ. ಸಮಾವೇಶದಲ್ಲಿ ವಧು-ವರರ ಜೊತೆಗೆ ಪಾಲಕರು ಭಾಗವಹಿಸಬಹುದಾಗಿದೆ. ವಿಜಯಪುರ ಜಿಲ್ಲೆಯಿಂದ ವಧು-ವರರು ಹಾಗೂ ಅವರೊಂದಿಗೆ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿಜಯಪುರ ಜ್ಞಾನಗಂಗಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎಸ್.ಎಂ. ಗಾಣೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗದಗ : ವಧು-ವರರ ಸಮಾವೇಶ

