24 ಗಂಟೆಗಳ ಕಾಲ ಸುರಿದ ಭಾರಿ ಮಳೆಯಲ್ಲಿಯೂ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕೆಚ್ಚೆದೆಯ ಹೋರಾಟ ಮುಂದುವರಿಕೆ

A B Dharwadkar
24 ಗಂಟೆಗಳ ಕಾಲ ಸುರಿದ ಭಾರಿ ಮಳೆಯಲ್ಲಿಯೂ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕೆಚ್ಚೆದೆಯ ಹೋರಾಟ ಮುಂದುವರಿಕೆ

ವಿಜಯಪುರ : ಹತ್ತನೇ ದಿನಕ್ಕೆ ಕಾಲಿಟ್ಟ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಹೋರಾಟ ನಡೆಯುತ್ತಿದೆ. ಮಳೆಯನ್ನು ಲೆಕ್ಕಿಸದೇ ನಡೆಯುತ್ತಿರುವ ಈ ಅನಿರ್ದಿಷ್ಟ ಧರಣಿಯನ್ನು ಉದ್ದೇಶಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ರಾಜ್ಯಾಧ್ಯಕ್ಷ ವಿ.ಕೃಷ್ಣೆಗೌಡ ಮಾತನಾಡಿ, ವಿಜಯಪುರ ಜಿಲ್ಲೆ ಗಡಿ ಜಿಲ್ಲೆಯಾಗಿದ್ಗು ಮೂಲಭೂತ ಸೌಕರ್ಯಗಳಿಂದ ನಲುಗಿ ಹೋಗಿದೆ. ಇದಕ್ಕೆ ಕಾರಣ ಜಿಲ್ಲೆಯ ಜನಪ್ರತಿನಿಧಿಗಳ ಇಚ್ಚಾಸಕ್ತಿಯ ಕೊರತೆ ಎದ್ದು ಕಾಣುತ್ತಿದೆ ಎಂದು ದೂರಿದರು.

ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಬಹಳ ಅತ್ಯಾವಶ್ಯಕ ಇದೆ. ವಿಜಯಪುರ ಜಿಲ್ಲೆ ಸೇರಿದಂತೆ ಮಹಾರಾಷ್ಟ್ರ ರಾಜ್ಯದ ಗಡಿ ಪ್ರದೇಶದ ಜನತೆ ವಿಜಯಪುರ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವುದು ಸರ್ವೆಸಾಮಾನ್ಯ. ಇದರ ಬಗ್ಗೆ ರಾಜಕಾರಣಿಗಳು ಗಮನ ಹರಿಸಿ ಕೂಡಲೇ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು. ನಾನು ಈ ಹೋರಾಟವನ್ನು ಬೆಂಬಲಿಸಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಪರ, ಪ್ರಗತಿಪರ ಸಂಘಟನೆಗಳ ಸಭೆ ಕರೆದು ಉಗ್ರ ಹೋರಾಟ ರೂಪಿಸಲು ಮುಂದಾಗುತ್ತೇನೆ ಎಂದು ಹೇಳಿದರು.

ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಬಬಲೇಶ್ವರ ತಾಲ್ಲೂಕು ಅಧ್ಯಕ್ಷ ಸುರೇಶ ಕಿರಸೂರ ಮಾತನಾಡಿ, ಸರ್ಕಾರಕ್ಕೆ ಹಣದ ಕೊರತೆಯೇನು ಇಲ್ಲ, ನಮ್ಮ ಜಿಲ್ಲೆಯ ಸಚಿವದ್ವಯರು ಹಾಗೂ ಶಾಸಕರು ಕೂಡಲೇ ಖಾಸಗಿ ಸಹಭಾಗಿತ್ವವನ್ನು ಕೈಬಿಟ್ಟು ಸರ್ಕಾರ ವೈದ್ಯಕೀಯ ಕಾಲೇಜು ಸ್ಥಾಪಿಸುವಂತೆ ಒತ್ತಾಯಿಸಿದರು.

ಕರವೇ ರಾಜ್ಯ ಸಮಿತಿಯ ಸತೀಶ, ಜಿಲ್ಲಾಧ್ಯಕ್ಷ ಲಿಂಗರಾಜ ಬಿದರಕುಂದಿ, ಜಿಲ್ಲಾ ಉಪಾಧ್ಯಕ್ಷರುಗಳಾದ ಬಾಪುಗೌಡ ಪಾಟೀಲ, ಪ್ರಭು ಮಂಕಣಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವು ಕಂಬಾರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂಕೇತ ಪಟ್ಟದ, ಜಿಲ್ಲಾ ಕಾರ್ಯಾಧ್ಯಕ್ಷ ಬಸಲಿಂಗಪ್ಪ ಕಪಾಳಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಂ. ಆರ್. ಗುರಿಕಾರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಸಾಹುಕಾರ, ಉಪಾಧ್ಯಕ್ಷೆ ಬಸಮ್ಮ ಜಾಬ, ರೈತ ಸಂಘಟನೆಯ ಪದಾಧಿಕಾರಿಗಳಾದ ಬಸವರಾಜ ರೆಡ್ಡಿ, ರಂಗಪ್ಪ ಹೂಗಾರ, ಗಿರಿಮಲ್ಲಪ್ಪ ಜಂಬಗಿ, ಪ್ರಕಾಶ ಬಿರಾದರ, ಅರವಿಂದ ಕುಲಕರ್ಣಿ, ಭಗವಾನ್ ರೆಡ್ಡಿ, ಅನಿಲ ಹೊಸಮನಿ, ಲಲಿತಾ ಬಿಜ್ಜರಗಿ, ಮಲ್ಲಿಕಾರ್ಜುನ ಬಟಗಿ, ಮಲ್ಲಿಕಾರ್ಜುನ ಕೆಂಗನಾಳ, ಭರತಕುಮಾರ ಹೆಚ್ ಟಿ, ರಾಜೆಸಾಬ್ ಶಿವನಗುತ್ತಿ, ದಸ್ತಗಿರಿ ಉಕ್ಕಲಿ, ಅಬ್ದುಲ ರಹಮನ್ ನಾಸಿರ್, ಸುರೇಶ್ ಬಿಜಾಪುರ, ಬಾಬುರಾವ ಬೀರಕಬ್ಬಿ, ಅಕ್ರಮ ಮಾಶಳಕರ, ವಿದ್ಯಾವತಿ ಅಂಕಲಗಿ, ಸಂಗಮೇಶ್ ಸಗರ, ಪ್ರಭುಗೌಡ ಪಾಟೀಲ, ಸಿದ್ರಾಮಯ್ಯ ಹಿರೇಮಠ, ಬೋಗೇಶ್ ಸೋಲಾಪುರ್, ಗೀತಾ ಎಚ್, ನೀಲಾಂಬಿಕಾ ಬಿರಾದರ,ಫಯಾಜ ಕಲಾದಗಿ, ದಾದಾಫಿರ್ ಮುಜಾವರ್,ಹುಸೇನ್ ಸಾಬ್ ಮುಲ್ಲಾ, ಪೂಜಾ ಜುಮ್ಮೆವಾಲೆ, ಚಂದು ಜಾದವ ರೇಣುಕಾ, ಭಾಗೀರಥಿ ಗಡದಿನ್ನಿ, ಸುಶೀಲಾ ಮಿಣಜಗಿ, ಜ್ಯೋತಿ ಮಿಣಜಗಿ, ಮುಂತಾದವರು ಭಾಗವಹಿಸಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.