ಬಸವ ಕಾಯಕ ಜೀವಿಗಳ ಸಂಘದ ವತಿಯಿಂದ ಸ್ಮಶಾನ ಸ್ವಚ್ಛತಾ ಕಾರ್ಯಕ್ರಮ, ವೃಕ್ಷಾಭಿಯಾನ

A B Dharwadkar
ಬಸವ ಕಾಯಕ ಜೀವಿಗಳ ಸಂಘದ ವತಿಯಿಂದ ಸ್ಮಶಾನ ಸ್ವಚ್ಛತಾ ಕಾರ್ಯಕ್ರಮ, ವೃಕ್ಷಾಭಿಯಾನ

ಬೆಳಗಾವಿ : ಶಹಾಪುರ ಹಿಂದವಾಡಿ ನಗರದ ಲಿಂಗಾಯತ ಸ್ಮಶಾನದಲ್ಲಿ ಬಸವ ಕಾರ್ಯಕ ಜೀವಿಗಳ ಸಂಘದ ವತಿಯಿಂದ ಸ್ಮಶಾನ ಸ್ವಚ್ಛತಾ ಕಾರ್ಯಕ್ರಮ ಹಾಗೂ ವೃಕ್ಷಾಭಿಯಾನವನ್ನು ಏರ್ಪಡಿಸಲಾಯಿತು.

ಈ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಲಾಯಿತು. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಸಸಿ ನೆಡುವ ಮೂಲಕ ವೃಕ್ಷಾ ಅಭಿಯಾನಕ್ಕೆ ಚಾಲನೆ ನೀಡಿದರು.

ಕಮಬಸವ ಕಾಯಕ ಜೀವಿಗಳ ಸಂಘದ ಅಧ್ಯಕ್ಷ ಸೂರ್ಯಕಾಂತ ಭಾವಿ, ದಾನಮ್ಮಾ ದೇವಿ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಬೆಂಬಳಗಿ, ಚನ್ನಬಸವ ಫೌಂಡೇಶನ್ ಸಂಸ್ಥಾಪಕ ಶಂಕರ ಗುಡಸ,  ರಾಷ್ಟ್ರೀಯ ಬಸವದಳ ಅಧ್ಯಕ್ಷ ಅಶೋಕ ಬೆಂಡಿಗೇರಿ, ಸುರೇಶ ಫೌಂಡೇಶನ್ ಸದಸ್ಯ, ಬಸವ ಕಾಯಕ ಜೀವಿಗಳ ಸಂಘದ ನಿರ್ದೇಶಕ ಕೆ. ಶರಣ ಪ್ರಸಾದ್, ಆನಂದ ಗುಡಸ, ರಮೇಶ ಭೈರಾಜಿ,ಮಹಾಂತೇಶ ಗುಡಸ, ವೀರೇಶ ಉಳವಿ,ಬಸವರಾಜ ಗುಡಸ, ನಿತಿನ್ ಗುಡಸ,ಕುಮಾರ್ ಗುಡಿಯಾಳ ಸಂತೋಷ ಗುಡಸ,  ಬಸವರಾಜ ಹಂಪಣ್ಣವರ, ಶಿವಲಿಂಗ ದಿವಟಗಿ,  ಮಲ್ಲಿಕಾರ್ಜುನ ಆಡಿನ ,  ಮಲ್ಲಿಕಾರ್ಜುನ ಬಾಬಾನಗರ. ವಿಜಯ ಲಿಂಗಾಯತ ಸೋಮಲಿಂಗಪ್ಪ ಮದ್ನಳ್ಳಿ ನೀಲಗಂಗಾ ಪಾಟೀಲ, ಸುಶಿಲಾ ಲಿಂಗಾಯತ, ಶೀಲಾ ಗುಡಸ, ಮಹಾದೇವಿ ಗುಡಸ್, ಕೆ. ರೂಪಾಶರಣ ಪ್ರಸಾದ್, ಸ್ವಾತಿ ಗುಡಿಯಾಳ, ನಿರ್ಮಲ ಮೂಗಬಸ್ತಿ ಹಾಗೂ ಸಮಾಜದ ಮುಖಂಡರು, ಬಸವ ಕಾರ್ಯಕ ಜೀವಿಗಳ ಸಂಘದ ಸದಸ್ಯರು ಮತ್ತು ಶರಣೆಯರು ಭಾಗವಹಿಸಿ ಸಮಾಜ ಸೇವೆಯ ಸಂದೇಶವನ್ನು ಸಾರಿದರು.

ಈ ಸಂದರ್ಭದಲ್ಲಿ ಮುಖಂಡರು ಮಾತನಾಡಿ, “ಸ್ಮಶಾನ ಸ್ವಚ್ಛತೆ ಮತ್ತು ವೃಕ್ಷಾರೋಪಣೆಯ ಮೂಲಕ ಸಮಾಜಕ್ಕೆ ಆರೋಗ್ಯಕರ ಹಾಗೂ ಹಸಿರು ವಾತಾವರಣವನ್ನು ಒದಗಿಸಬಹುದು. ಬಸವ ತತ್ತ್ವದ ಅನುಸರಣೆ ಮೂಲಕ ಸೇವೆಯ ಮಾರ್ಗದಲ್ಲಿ ಮುಂದುವರಿಯುವುದು ಎಲ್ಲರ ಹೊಣೆಗಾರಿಕೆ” ಎಂದು ಹೇಳಿದರು.

ಸಮಾಜದ ಮುಖಂಡರಾದ  ಶಿವಶಂಕರಯ್ಯ ಅಲ್ಲಯ್ಯನವರ ಮಠ, ಎಂ.ಎಂ.ಸತ್ತಿಗೇರಿ, ಕೆಂಪಣ್ಣ ರಾಮಪುರಿ, ಶಿವಪ್ಪ ಕಾದ್ರೋಳಿ, ಈರಣ್ಣ ಬೊಮ್ಮಣ್ಣವರ, ರಾಜೇಶ  ಶಿಗೇಹಳ್ಳಿ, ಶ್ಯಾಮ ಗೌಡರ್ ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.