ಗೋಕಾಕ: ನೀರು ಇಮರುತ್ತಿರುವ ಘಟಪ್ರಭಾ ನದಿಯ ಸಾವಳಗಿ ಗ್ರಾಮದ ವ್ಯಾಪ್ತಿಯಲ್ಲಿ ಬೃಹದ ಗಾತ್ರದ ಮೊಸಳೆಯೊಂದು ಕಂಡುಬಂದಿದ್ದು ಆತಂಕಕ್ಕೆ ಕಾರಣವಾಗಿದೆ.
ಗ್ರಾಮದ ಕೂಗಳತೆ ದೂರದಲ್ಲಿರುವ ನದಿಯಲ್ಲಿ ಸುತ್ತಮುತ್ತ ಕಳೆದ ಎರಡು ದಿನಗಳಿಂದ ಮೊಸಳೆ ತಿರುಗಾಡುತ್ತಿರುವುದನ್ನು ರೈತರು ಗಮನಿಸಿದ್ದಾರೆ. ಮೊಸಳೆ ಮಲಗಿರುವುದು ಹಾಗೂ ನೀರಿನೊಳಗೆ ಮೊಸಳೆ ಮುಳುಗಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಮೂರು ದಿನಗಳಿಂದ ಗಮನಿಸಿದ ನಂತರ ಮೊಸಳೆ ಎಂದು ದೃಢಪಟ್ಟಿದೆ. ತಕ್ಷಣವೇ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.
ಕಬ್ಬು, ಮೇಕೆಜೋಳ, ಭತ್ತ ಬೆಳೆಗಳಿರುವ ಜಮೀನಿನ ವ್ಯಾಪ್ತಿಯಲ್ಲಿ ಮೊಸಳೆ ಸಂಚರಿಸುತ್ತಿರುವುದು ರೈತರಿಗೆ ಕಂಡುಬಂದಿದೆ. ನಿರ್ಲಕ್ಷ್ಯ ವಹಿಸದೆ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
ನದಿ ತೀರದ ಜನರು ಹೊಲಗಳಿಗೆ ಹೋಗಲು ಹೆದರುತ್ತಿದ್ದಾರೆ. 2023-2024 ರಿಂದ ಮೊಸಳೆಗಳು ಪ್ರತ್ಯಕ್ಷವಾಗುತ್ತಿವೆ. ಆ ಬಳಿಕ, ಕೆಲವು ತಿಂಗಳಿನಿಂದ ಮೊಸಳೆ ಚಲನ-ವಲನ ಜಮೀನ ಮಾಲೀಕರಿಗೆ ಕಂಡಿಲ್ಲ, ಇಂದು (2025) ಬೆಳಗಿನ ಜಾವ ಮತ್ತೆ ನದಿಯ ತೀರದಲ್ಲಿ ಮೊಸಳೆ ಪ್ರತ್ಯಕ್ಷವಾಗಿರುವುದು ಜಮೀನಿನ ಮಾಲೀಕರಿಗೆ ಭಯ ಉಂಟಾಗಿದೆ. ಅರಣ್ಯ ಅಧಿಕಾರಿಗಳುಶೀಘ್ರವೇ ಮೊಸಳೆಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

