ಖಾನಾಪುರ: ಸ್ಥಳೀಯ ಶಾಂತಿನಿಕೇತನ ಶಾಲೆಯ ಆವರಣದಲ್ಲಿ ಶನಿವಾರ ವಿದ್ಯಾಭಾರತಿ ಕರ್ನಾಟಕ ಪ್ರಾಯೋಜಕತ್ವದಲ್ಲಿ ಮತ್ತು ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮಿ ಗ್ರೂಪ್ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿ ಜರುಗಿತು.
ಪಂದ್ಯಾವಳಿಯನ್ನು ಶಾಸಕ ಹಾಗೂ ಶ್ರೀ ಮಹಾಲಕ್ಷ್ಮಿ ಗ್ರೂಪ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ವಿಠ್ಠಲ ಹಲಗೇಕರ ಉದ್ಘಾಟಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೋಚೇರಿ, ಆರ್.ಎಸ್.ಎಸ್ ಮುಖಂಡ ಸುಭಾಸ ದೇಶಪಾಂಡೆ, ಮಹಾಲಕ್ಷ್ಮಿ ಗ್ರೂಪ್ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಚಾಂಗಪ್ಪ ನಿಲಜಕರ, ವಿಠ್ಠಲ ಕರಂಬಳಕರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕರಾಟೆ ಸ್ಪರ್ಧಿಗಳು, ರೆಫರಿಗಳು, ನಿರ್ಣಾಯಕರು, ಶಾಂತಿನಿಕೇತನ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಮತ್ತು ಆಹ್ವಾನಿತರು ಉಪಸ್ಥಿತರಿದ್ದರು. ಸಂಭಾಜಿ ಕದಮ ಕಾರ್ಯಕ್ರಮ ನಿರ್ವಹಿಸಿದರು. ಸ್ವಾತಿಕಮಲ ವಾಳ್ವೆ ಸ್ವಾಗತಿಸಿದರು. ಮನೀಷಾ ಭೋಸಲೆ ವಂದಿಸಿದರು.

