ರೈಲಿನಲ್ಲಿ ಮೊಬೈಲ್ ಲಾಂಚರಿನಿಂದ ಅಗ್ನಿ ಪ್ರೈಮ್ ಕ್ಷಿಪಣಿ ಹಾರಿಸಿದ ಭಾರತ ; ಇದರಿಂದ 2000 ಕಿಮೀ ದೂರದ ಟಾರ್ಗೆಟ್‌ ನಾಶ ಸಾಧ್ಯ

A B Dharwadkar
ರೈಲಿನಲ್ಲಿ ಮೊಬೈಲ್ ಲಾಂಚರಿನಿಂದ ಅಗ್ನಿ ಪ್ರೈಮ್ ಕ್ಷಿಪಣಿ ಹಾರಿಸಿದ ಭಾರತ ; ಇದರಿಂದ 2000 ಕಿಮೀ ದೂರದ ಟಾರ್ಗೆಟ್‌ ನಾಶ ಸಾಧ್ಯ

ನವದೆಹಲಿ : ಭಾರತವು ರೈಲು ಆಧಾರಿತ ಮೊಬೈಲ್ ಲಾಂಚರ್ ವ್ಯವಸ್ಥೆಯಿಂದ ಮಧ್ಯಂತರ ಶ್ರೇಣಿಯ ಅಗ್ನಿ-ಪ್ರೈಮ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಪ್ರಕಟಿಸಿದ್ದಾರೆ.

X ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ರಕ್ಷಣಾ ಸಚಿವರು, ಮುಂದಿನ ಪೀಳಿಗೆಯ ಕ್ಷಿಪಣಿಯು 2000 ಕಿ.ಮೀ. ವ್ಯಾಪ್ತಿಯನ್ನು ಕ್ರಮಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ಈ ಕ್ಷಿಪಣಿಯು ವಿವಿಧ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಿದ್ದಾರೆ.
ವಿಶೇಷವಾಗಿ ವಿನ್ಯಾಸಗೊಳಿಸಲಾದ ರೈಲು ಆಧಾರಿತ ಮೊಬೈಲ್ ಲಾಂಚರ್‌ನಿಂದ ಇಂದು, ಗುರುವಾರ (ಸೆ.೨೫) ನಡೆಸಲಾದ ಈ ರೀತಿಯ ಮೊದಲ ಉಡಾವಣೆ ಮಾಡಲಾಗಿದ್ದು, ಯಾವುದೇ ರೈಲು ಜಾಲದಲ್ಲಿ ಇದನ್ನು ಉಡಾಯಿಸಬಹುದು.

ಮಧ್ಯಂತರ ಶ್ರೇಣಿಯ ಅಗ್ನಿ-ಪ್ರೈಮ್ ಕ್ಷಿಪಣಿಯ ಯಶಸ್ವಿ ಪರೀಕ್ಷೆಗಾಗಿ ಡಿಆರ್‌ಡಿಒ , ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ಮತ್ತು ಸಶಸ್ತ್ರ ಪಡೆಗಳನ್ನು ಸಿಂಗ್ ಅಭಿನಂದಿಸಿದರು, ಈ ಪರೀಕ್ಷೆಯು ಭಾರತವನ್ನು ರೈಲು-ಮೊಬೈಲ್ ವ್ಯವಸ್ಥೆಯಿಂದ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯವಿರುವ ಆಯ್ದ ರಾಷ್ಟ್ರಗಳ ಗುಂಪಿಗೆ ಸೇರಿಸಿದೆ ಎಂದು ಹೇಳಿದ್ದಾರೆ.
ಪ್ರತಿಯೊಂದು ಕ್ಷೇತ್ರದಲ್ಲೂ ‘ಆತ್ಮನಿರ್ಭರತ ಆಗಬೇಕು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಉದ್ದೇಶದಂತೆ ಇದು ಭಾರತದ ರಕ್ಷಣಾ ಸಾಮರ್ಥ್ಯಗಳಲ್ಲಿ ಸ್ವಾವಲಂಬನೆ ಉದ್ದೇಶದ ಒಂದು ಭಾಗವಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.