ಬೆಂಗಳೂರು: ಬಿಎಫ್ ೭ ಕೊರೋನಾ ವೈರಸ್‌ನ ಓಮಿಕ್ರಾನ್ ಉಪ ರೂಪಾಂತರ ತಳಿಯಾಗಿದ್ದು, ಅದರ ತೀವ್ರತೆ ಬಗ್ಗೆ ಭಾರತವುಹೆಚ್ಚು ಚಿಂತಿಸಬೇಕಾಗಿಲ್ಲ ಎಂದು ದೇಶದ ಖ್ಯಾತ ವಿಜ್ಞಾನಿ ರಾಕೇಶ ಮಿಶ್ರಾ ಹೇಳಿದ್ದಾರೆ.
ಆದರೆ ಮಾಸ್ಕ್ ಧರಿಸುವುದು ಮತ್ತು ಅನಗತ್ಯ ಜನಸಂದಣಿಯನ್ನು ತಪ್ಪಿಸುವುದು ಯಾವಾಗಲೂ ಸೂಕ್ತ ಎಂದು ಬೆಂಗಳೂರಿನಟಾಟಾ ಇನ್‌ಸ್ಟಿಟ್ಯೂಟ್ ಫಾರ್ ಜೆನೆಟಿಕ್ಸ್ ಅಂಡ್ ಸೊಸೈಟಿ (ಟಿಐಜಿಎಸ್) ನಿರ್ದೇಶಕ ರಾಕೇಶ ಮಿಶ್ರಾ ಎಚ್ಚರಿಸಿದ್ದಾರೆ. ನೆರೆಯ ದೇಶ ಚೀನಾ ಭಾರತ ಎದುರಿಸಿದ ಸೋಂಕಿನ ವಿವಿಧ ಅಲೆಗಳನ್ನು ಎದುರಿಸದ ಕಾರಣ ಇದೀಗ ಅಲ್ಲಿ ಹೆಚ್ಚಿನಪ್ರಮಾಣದಲ್ಲಿ ಕೋವಿಡ್ ಉಲ್ಬಣವಾಗಿ ಸಾವುಗಳು ಸಂಭವಿಸುತ್ತಿವೆ ಅವರು ಶುಕ್ರವಾರ ಹೇಳಿದ್ದಾರೆ.
ಓಮಿಕ್ರಾನ್ ವೈರಸ್ ನ ಉಪ–ರೂಪವಾಗಿದೆ. ಕೆಲವು ಸಣ್ಣ ಬದಲಾವಣೆಗಳನ್ನು ಹೊರತುಪಡಿಸಿ ಮುಖ್ಯ ವೈಶಿಷ್ಟ್ಯಗಳುಓಮಿಕ್ರಾನ್ ನಂತೆ ಇರುತ್ತದೆ, ಯಾವುದೇ ದೊಡ್ಡ ವ್ಯತ್ಯಾಸವಿಲ್ಲ. ನಮ್ಮಲ್ಲಿನ ಜನರು ಓಮಿಕ್ರಾನ್ ಅಲೆ ನೋಡಿದ್ದಾರೆ. ಆದ್ದರಿಂದ, ನಾವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ.