ಕರ್ನಾಟಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಇಂದಿನಿಂದ ಬೆಳಗಾವಿ ಜಿಲ್ಲೆಯಲ್ಲಿ 12 ಲಕ್ಷ ಕುಟುಂಬಗಳ ಸಮೀಕ್ಷೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್

A B Dharwadkar
ಕರ್ನಾಟಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಇಂದಿನಿಂದ  ಬೆಳಗಾವಿ ಜಿಲ್ಲೆಯಲ್ಲಿ 12 ಲಕ್ಷ ಕುಟುಂಬಗಳ ಸಮೀಕ್ಷೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್

ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ದಿನಾಂಕ 22-09-2025 ರಿಂದ ದಿನಾಂಕ 7-10-2025 ವರೆಗೆ ಕೈಗೊಳ್ಳಲಾಗುವುದು.

ಬೆಳಗಾವಿ ಜಿಲ್ಲೆಯಲ್ಲಿ ಅಂದಾಜು 12 ಲಕ್ಷ ಕುಟುಂಬಗಳು ವಾಸಿಸುತ್ತಿದ್ದು, ಹಿಂದುಳಿದ ವರ್ಗಗಳ ಆಯೋಗದ ಮಾರ್ಗಸೂಚಿ ಪ್ರಕಾರ ಸಮೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಮೀಕ್ಷೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಕರು ಹಾಗೂ ಇತರೆ ಇಲಾಖೆಯ ಸರ್ಕಾರಿ ನೌಕರರಿಂದ ಸಮೀಕ್ಷೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ತಾಲೂಕುವಾರು ಕುಟುಂಬಗಳ ಸಂಖ್ಯೆ:

ಅಥಣಿ- 100880 ಬೈಲಹೊಂಗಲ-91460, ಬೆಳಗಾವಿ-30700 ಚಿಕ್ಕೋಡಿ-161000 ಗೋಕಾಕ-132200 ಹುಕ್ಕೇರಿ-101800 ಖಾನಾಪೂರ-64200 ರಾಯಬಾಗ-80300 ರಾಮದುರ್ಗ-62100 ಸವದತ್ತಿ-80500

ಈ ಎಲ್ಲಾ ಕುಟುಂಬದ ಸಮೀಕ್ಷೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಕರು ಹಾಗೂ ಇತರೆ ಇಲಾಖೆಯ ಸರ್ಕಾರಿ ನೌಕರರಿಂದ ಸಮೀಕ್ಷೆಯನ್ನು ಮಾಡಲಾಗುತ್ತದೆ.

ಮೇಲ್ಕಾಣಿಸಿದ ಎಲ್ಲಾ ಮನೆಗಳಿಗೆ HESCOM ವತಿಯಿಂದ ಪ್ರತಿಯೊಂದು ವಿದ್ಯುತ್ ಮೀಟರಗಳಿಗೆ ಸ್ಪೀಕರ ಅಳವಡಿಸಲಾಗಿದೆ. ಪ್ರತಿಯೊಂದು ಮನೆಗೆ ಪ್ರತ್ಯೇಕ UHID ಯನ್ನು ನಿಗದಿ ಮಾಡಲಾಗಿದೆ.

ಒಬ್ಬ ಗಣಿತಿದಾರರಿಗೆ ಗರಿಷ್ಠ 150 ಮನೆಗಳಂತೆ ಜಿಲ್ಲೆಯಲ್ಲಿ ಅಂದಾಜು 10,803 ನೇಮಿಸಲಾಗಿದ್ದು ಎರಡು ಹಂತದ ತರಬೇತಿ ನೀಡಲಾಗಿದೆ. ಗಣಿತದಾರರನ್ನು

50 ಗಣತಿದಾರರಂತೆ ಒಬ್ಬ ಮಾಸ್ಟರ್ ಟ್ರೇನರಂತೆ 200 ಮಾಸ್ಟರ್ ಟ್ರೇನರಗಳನ್ನು ನೇಮಿಸಿ, ತರಬೇತಿ ನೀಡಲಾಗಿದೆ.
20 ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರಂತೆ 525 ಮೇಲ್ವಿಚಾರಕರನ್ನು ನೇಮಿಸಲಾಗಿದ್ದು, ತರಬೇತಿ ನೀಡಲಾಗಿದೆ.

NRLM SELF HELP GROUP ಸದಸ್ಯರಿಂದ ಸಮೀಕ್ಷೆ ಕುರಿತು ಮನೆ ಮನೆಗೆ ಪ್ರಚಾರ ಕಾರ್ಯ ನಡೆಸಲಾಗುತ್ತಿದೆ.

ಮೊಬೈಲ್ ನೆಟವರ್ಕ ಇಲ್ಲದೆ ಇರುವ ಪ್ರದೇಶಗಳನ್ನು ಗುರುತಿಸಿ ಸಮೀಪದ ಸರ್ಕಾರಿ ಕಟ್ಟಡಗಳಲ್ಲಿ ಕ್ಯಾಂಪ ಮೊಡ್ ಮೂಲಕ ಸದರಿ ಕುಟುಂಬಗಳ ಸಮೀಕ್ಷೆಯನ್ನು ಕೈಗೂಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.