ಬೆಳಗಾವಿ: ನಗರದಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡ ಕನ್ನಡಿಗರ ಮೇಲೆ ಕೆಲವರು ಹಲ್ಲೆ ನಡೆಸಿ ಬೇಕಾಬಿಟ್ಟಿ ಚಾಕುವಿನಿಂದ ಇರಿದು ಓಡಿ ಹೋಗಿದ್ದರು. ಈ ಸಂಬಂಧ ಪೊಲೀಸರು ಚಾಕು ಇರಿದ ಓರ್ವ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈತ ಗಾಂಜಾ ಸೇವನೆ ಮಾಡಿ ಚಾಕು ಇರಿದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು ವ್ಯಕ್ತಿಯ ಬಾಯಿ ಬಿಡಿಸುವ ಕೆಲಸ ನಡೆದಿದೆ.

