ಗೋಕಾಕ, ನ. 23 : ಗೋಕಾಕದ ಸುಪ್ರಸಿದ್ಧ ಕಲಬುರ್ಗಿ ಕರದಂಟು ಮತ್ತು ಕಲಬುರ್ಗಿ ಹೋಟೆಲ್ ಮಾಲೀಕರಾದ ಮಹೇಶ ಮುರಿಗೆಪ್ಪ ಕಲಬುರ್ಗಿ ಅವರು ಇಂದು ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ.
ಅವರಿಗೆ 69 ವರ್ಷ ವಯಸ್ಸಾಗಿತ್ತು.
ಕೆಲ ದಿನಗಳಿಂದ ಅನಾರೋಗ್ಯದಿಂದಿದ್ದ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತರು ಇಬ್ಬರು ಪುತ್ರಿಯರು, ಒಬ್ಬ ಪುತ್ರನನ್ನು ಅಗಲಿದ್ದಾರೆ. ರವಿವಾರ ಮಧ್ಯಾಹ್ನ 3 ಗಂಟೆಗೆ ಗೋಕಾಕದ ಜ್ಞಾನ ಮಂದಿರ ಬಳಿ ಇರುವ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

