ಬೆಳಗಾವಿ, ನ, ೧ : ಬೆಳಗಾವಿ ರಾಜ್ಯೋತ್ಸವದ ವಿರುದ್ಧವಾಗಿ ಅನುಮತಿ ಇಲ್ಲದೇ ಕರಾಳ ದಿನಾಚರಣೆ ನಡೆಸಿ ಪುಂಡಾಟ ಮೆರೆದಿದ್ದ ಎಂಇಎಸ್ ಮುಖಂಡ ಶುಭಂ ಶೇಳಕೆಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ಗೋವಾವೇಸ್ ಸರ್ಕಲ್ ಬಳಿ ಶುಭಂ ಶೆಳಕೆಯನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗೋವಾದತ್ತ ಪರಾರಿಯಾಗುತ್ತಿದ್ದ ಶುಭಂನನ್ನು ಸಿನಿಮಾ ಸ್ಟೈಲ್ ನಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ. ಭಾಷಾ ಸಾಮರಸ್ಯ, ಶಾಂತಿ ಭಂಗ ಸೇರಿದಂತೆ ಶುಭಂ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

