ಬೆಳಗಾವಿ, ನ. 30: ಬಾಗಲಕೋಟದಲ್ಲಿ ನ.28 ರಂದು ನಡೆದ ಅಸ್ಮಿತಾ ಡಿಸ್ಟ್ರಿಕ್ಟ ಅಥ್ಲೇಟಿಕ್ಸ ಲೀಗ್ 2025-26 ರ 600 ಮೀಟರ್ ಓಟದ ಸ್ಪರ್ಧೆಯಲ್ಲಿ ಮೂಡಲಗಿ ತಾಲೂಕು ಯಾದವಾಡ ವಿದ್ಯಾವರ್ಧಕ ಸಂಘದ ಜಿಎನ್ಎಸ್ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿ ಜ್ಯೋತಿ ಘಾಟಗೆ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ವಿದ್ಯಾರ್ಥಿನಿ ಜ್ಯೋತಿಯ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಶಿವಪ್ಪಣ್ಣ ನ್ಯಾಮಗೌಡರ, ಮುಖ್ಯಾಧ್ಯಾಪಕ ಜಿ.ಎಚ್. ಕಾಂಬಳೆ, ದೈಹಿಕ ಶಿಕ್ಷಕ ಪಠಾಣ ಗುರುಗಳು, ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

