LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ರಣಭೀಕರ ಬಿಸಿಲಿಗೆ ರಾಜ್ಯ ತಲ್ಲಣ:ವಿಜಯಪುರದಲ್ಲಿ ಬಿಸಿಲಿನ ಬೇಗೆಗೆ 15 ವರ್ಷದ ಬಾಲಕ ಬಲಿ

ಬಿಸಿಲು ಹೆಚ್ಚಳ: ವಿಜಯಪುರದಲ್ಲಿ 15 ವರ್ಷದ ಬಾಲಕ ಬಲಿ

ಬೆಂಗಳೂರು, ಏ. 29 : ರಾಜ್ಯದಲ್ಲಿ ಸೂರ್ಯನ ತೀವ್ರತೆ ದಿನೇದಿನೇ ಹೆಚ್ಚುತ್ತಿದ್ದು, ವಿಜಯಪುರ ಜಿಲ್ಲೆಯಲ್ಲಿ ತೀವ್ರ ಉಷ್ಣಾಘಾತದಿಂದ 15 ವರ್ಷದ ಬಾಲಕನೊಬ್ಬ ಮೃತಪಟ್ಟ ದುಃಖಕರ ಘಟನೆ ನಡೆದಿದೆ.

ಮುದ್ದೇಬಿಹಾಳ ತಾಲೂಕಿನ ಇಂಗಳಗಿ ಗ್ರಾಮದ ಶ್ರೀಶೈಲ ಬಿರಾದಾರ 15 ಮೃತಪಟ್ಟ ಬಾಲಕ. ಬೇಸಿಗೆ ರಜೆಯ ಹಿನ್ನೆಲೆ ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಆಟವಾಡಿದ್ದ ಎಂದು ತಿಳಿದುಬಂದಿದೆ. ಬಿಸಿಲಿನ ತಾಪದಿಂದ ತೀವ್ರ ಅಸ್ವಸ್ಥಗೊಂಡ ಬಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮನಕಲುಕುವಂತಿದೆ.

ರಾಯಚೂರಿನಲ್ಲಿ ಉದ್ಯೋಗ ಖಾತ್ರಿ ಕೆಲಸಕ್ಕೆ ತೆರಳಿದ್ದ ಹುಸೇನಪ್ಪ 45 ಎಂಬ ಕಾರ್ಮಿಕ ಕೆಲಸ ಮಾಡುವಾಗಲೇ ಬಿಸಿಲಿನ ತಾಪ ತಾಳಲಾರದೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಆರೋಗ್ಯ ಇಲಾಖೆಯ ಎಚ್ಚರಿಕೆ

ರಾಜ್ಯಾದ್ಯಂತ ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆ ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ಉಷ್ಣಾಘಾತ ಚಿಕಿತ್ಸಾ ವಿಭಾಗಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ಈ ಸೂಚನೆಗಳನ್ನು ಪಾಲಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ.

ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆಯವರೆಗೆ ಹೊರಗೆ ಹೋಗುವುದನ್ನು ತಪ್ಪಿಸಿ, ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಗರ್ಭಿಣಿಯರು ಜಾಗ್ರತೆ ವಹಿಸಬೇಕು.

ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರು, ಮಜ್ಜಿಗೆ, ಎಳನೀರು ಅಥವಾ ಓಆರ್‌ಎಸ್ ದ್ರವ ಸೇವಿಸಬೇಕು. ಸುಸ್ತು, ತಲೆತಿರುಗುವಿಕೆ ಅಥವಾ ಅತಿಯಾದ ವಾಂತಿ ಕಂಡುಬಂದರೆ ತಕ್ಷಣ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಧುಚಂದ್ರದ ಹತ್ಯೆ ಪ್ರಕರಣದಲ್ಲಿ ತಿರುವು ಸೋನಮ್ ರಘುವಂಶಿಗೆ ಜಾಮೀನು, 10 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆBIG NEWS : ರಾಜ್ಯದ ಗ್ರಾಮ ಪಂಚಾಯತಿಗಳ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಡಿವಾಣ: ಜಿಪಿಎಸ್ ಟ್ರ್ಯಾಕಿಂಗ್ ಶಿಫಾರಸುBREAKING : ಅಕ್ರಮ ಭ್ರೂಣಲಿಂಗ ಪತ್ತೆ ಹಗರಣ  : ಮೂವರು ವೈದ್ಯರ ಬಂಧನ!SHOCKING : ಮದುವೆಯಾಗಲು ಹುಡುಗಿ ಸಿಗದಿದ್ದಕ್ಕೆ ಮನನೊಂದು ಯುವಕನ ಆತ್ಮಹತ್ಯೆ!ರಣಭೀಕರ ಬಿಸಿಲಿಗೆ ರಾಜ್ಯ ತಲ್ಲಣ:ವಿಜಯಪುರದಲ್ಲಿ ಬಿಸಿಲಿನ ಬೇಗೆಗೆ 15 ವರ್ಷದ ಬಾಲಕ ಬಲಿಸಾವಿನ ಪುರಾವೆ ಕೇಳಿದ ಬ್ಯಾಂಕ್‌; ಸಮಾಧಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ವ್ಯಕ್ತಿ!ಯುವತಿಯ ಮೃತದೇಹ ನಗ್ನಾವಸ್ಥೆಯಲ್ಲಿ ಪತ್ತೆ!ರಾಷ್ಟ್ರ ಗೌರವ ಮತ್ತು ರಾಜತಾಂತ್ರಿಕತೆಅಥಣಿ ತಾಲೂಕಿನ ಹಳ್ಳಿಯೊಂದರ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ರಾಜ್ಯಕ್ಕೆ ಪ್ರಥಮಬಸವ ಜಯಂತಿ ಮಹೋತ್ಸವ: 26ರಂದು ಬೆಳಗಾವಿಯಲ್ಲಿ ಬೃಹತ್ ಮೆರವಣಿಗೆ