LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

1971ರಲ್ಲಿ ಪಾಕ್ ವಿರುದ್ಧ ಜಯ ಸಾಧಿಸಿದ ವಿಜಯ ದಿವಸ ಆಚರಣೆ

ಹೊಸದಿಲ್ಲಿ: 1971ರ ಯುದ್ಧದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿರುವ ದಿನವನ್ನು (ಡಿಸೆಂಬರ್ 16) ವಿಜಯ ದಿವಸ ಎಂದು ದೇಶಾದ್ಯಂತ ಆಚರಿಸಲಾಯಿತು. ಈ ಯುದ್ಧ ಬಾಂಗ್ಲಾದೇಶ ವಿಮೋಚನೆಗೆ ಸಂಬಂಧಿಸಿದ್ದಾಗಿದೆ.





ಈ ಯುದ್ಧದಲ್ಲಿ ಪಾಕಿಸ್ತಾನ ಪಡೆ ಸೋಲನ್ನನುಭವಿಸಿದ ನಂತರ 1971ರ ಡಿಸೆಂಬರ್ 16ರಂದು ಪಾಕ್ ಸೇನಾಪಡೆಯ ಜನರಲ್ ಅಮೀರ ಅಬ್ದುಲ್ಲಾ ಖಾನ್ ನಿಯಾಝಿ ನೇತೃತ್ವದ ಪಡೆ ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ಭಾರತದ ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಔರೋರಾ ಎದುರು ಬೇಷರತ್ತಾಗಿ ಶರಣಾಗಿತ್ತು.



ಇದರೊಂದಿಗೆ ಬಾಂಗ್ಲಾದೇಶ ಸ್ವತಂತ್ರಗೊಂಡು ಬಿಕ್ಕಟ್ಟಿನಿಂದ ಮುಕ್ತಿ ಪಡೆದಿತ್ತು. 1971ರ ಯುದ್ಧದ ಬಳಿಕ ಅಮೆರಿಕ ಮತ್ತು ದಕ್ಷಿಣ ಏಷ್ಯಾ ದೇಶಗಳಾದ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧ ಹದಗೆಡಲು ಕಾರಣವಾಗಿತ್ತು. ಈ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡುವುದಾಗಿ ಅಮೆರಿಕ ಭರವಸೆ ನೀಡಿತ್ತು. ಆದರೆ ಅಂದಿನ ಪ್ರಧಾನಿ ಇಂದಿರಾಗಾಂಧಿ ಸೋವಿಯತ್ ಯೂನಿಯನ್ ಜತೆ ಇಂಡೋ-ಸೋವಿಯತ್ ದೇಶದ ಸ್ನೇಹ ಮತ್ತು ಸಹಕಾರ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಅಮೆರಿಕಕ್ಕೆ ತಿರುಗೇಟು ನೀಡಿದ್ದರು.



ಪೂರ್ವ ಪಾಕಿಸ್ತಾನದಲ್ಲಿನ ಬಂಗಾಳಿ ಜನರ ಮೇಲೆ ಪಾಕ್ ಸೈನಿಕರು ನಡೆಸುತ್ತಿದ್ದ ಹತ್ಯಾಕಾಂಡವನ್ನು ತಡೆಯವ ಈ ಯುದ್ಧದಲ್ಲಿ ಭಾರತ ಮತ್ತು ಪಾಕಿಸ್ತಾನ 3,800ಕ್ಕೂ ಅಧಿಕ ಯೋಧರನ್ನು ಕಳೆದುಕೊಂಡಿತ್ತು.



ಡಿಸೆಂಬರ್ 16ರಂದು ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಮೀರ ಖಾನ್ ನಿಯಾಝಿ ನೇತೃತ್ವದ 93,000 ಸೈನಿಕರ ಪಡೆಯು ಪೂರ್ವ ಪಾಕಿಸ್ತಾನದಲ್ಲಿ ಭಾರತೀಯ ಸೇನಾಪಡೆಗೆ ಶರಣಾಗಿತ್ತು. ಕೊನೆಗೆ ಢಾಕಾದ ರಾಮ್ನಾ ರೇಸ್ ಕೋರ್ಸ್ ನಲ್ಲಿ ಶರಣಾಗತಿ ಪತ್ರಕ್ಕೆ ಪಾಕ್ ಸಹಿ ಹಾಕಿತ್ತು. ಪಾಕ್ ಸೈನಿಕರು ಮತ್ತು ಅವರ ಪರವಾಗಿದ್ದ ಪೂರ್ವ ಪಾಕಿಸ್ತಾನ ನಾಗರಿಕರನ್ನು ಭಾರತ ಯುದ್ಧ ಕೈದಿಗಳನ್ನಾಗಿ ತನ್ನ ವಶಕ್ಕೆ ತೆಗೆದುಕೊಂಡಿತ್ತು.



1971ರ ಭಾರತ ಮತ್ತು ಪಾಕ್ ನಡುವೆ ನಡೆದ 13 ದಿನಗಳ ಯುದ್ಧದಲ್ಲಿ ನೂರಾರು ವೀರ ಯೋಧರು ಹುತಾತ್ಮರಾಗಿದ್ದರು. ಈ ಹುತಾತ್ಮ ಯೋಧರನ್ನು ವಿಜಯ್ ದಿವಸ್ ಸಂದರ್ಭದಲ್ಲಿ ನೆನಪಿಸಿಕೊಳ್ಳುವ ಮೂಲಕ ಗೌರವ ನೀಡಲಾಗುತ್ತಿದೆ.



Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿವೃತ್ತ ಶಿಕ್ಷಕ ಶ್ರೀ ಎಸ್. ಎ. ಕೊತವಾಲ್ ನಿಧನನೀಟ್ ಪ್ರಶ್ನೆಪತ್ರಿಕೆ ಸೋರಿಕೆ: ಎನ್‌ಟಿಎ ವಿಷಯ ತಜ್ಞರೇ ರೂವಾರಿಗಳುಇಂಡಿಯಲ್ಲಿ ಬೀದಿ ನಾಯಿಗಳ ದಾಳಿ: ಇಬ್ಬರು ಮಕ್ಕಳಿಗೆ ಗಂಭೀರ ಗಾಯಬ್ರಹ್ಮಾಂಡ ಭ್ರಷ್ಟಾಚಾರ : ಸಿಬಿಐ ತನಿಖೆ ನಡುವೆಯೂ ಪಿಎನ್‌ಸಿ ಇನ್‌ಫ್ರಾಟೆಕ್‌ಗೆ 3,483 ಕೋಟಿ ರೂ. ಹೆದ್ದಾರಿ ಗುತ್ತಿಗೆಗದ್ದಲದಲ್ಲೇ ಸಾಗಿದ ಸಂಸತ್; ಚರ್ಚೆಯಿಲ್ಲದೆ ತೆರಿಗೆ ತಿದ್ದುಪಡಿ ಮಸೂದೆಗೆ ಒಪ್ಪಿಗೆ'ಮೋದಿ ಸರ್ವಾಧಿಕಾರಿಯಾಗಿದ್ದರೆ ಚೆನ್ನಾಗಿತ್ತು' ಎಂದ ರೂಪಾಲಿ ಗಂಗೂಲಿ; ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಧರಣಿಯಲ್ಲಿ ಮೊಳಗಿದ ಏಕತೆಯ ಸಂದೇಶ: ಜಾತಿ–ಧರ್ಮ ಮೀರಿ ವಿದ್ಯಾರ್ಥಿಗಳಿಗೆ ನೆರವುಬೈಕ್–ಬಸ್ ಮುಖಾಮುಖಿ ಡಿಕ್ಕಿ: ತಂದೆ, ಮಗಳು ಸೇರಿ ಮೂವರು ಸ್ಥಳದಲ್ಲೇ ಮೃತ್ಯು'ತೆಹೆಲ್ಕಾ' ಪತ್ರಿಕೆ ಮಾಜಿ ಪ್ರಧಾನ ಸಂಪಾದಕ ತರುಣ ತೇಜ್‌ಪಾಲಗೆ 10 ವರ್ಷ ಜೈಲು ಶಿಕ್ಷೆರೈಲು ಹಳಿ ಮಧ್ಯೆ ಕೆಟ್ಟು ನಿಂತ ಶಾಲಾ ವಾಹನ; ಗ್ರಾಮಸ್ಥರ ಸಮಯಪ್ರಜ್ಞೆಗೆ ತಪ್ಪಿದ ಭಾರೀ ದುರಂತ