ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕಬ್ಬು ಬೆಲೆ ನಿಗದಿ ವಿಚಾರವಾಗಿ ಹಿಂಸಾಚಾರ : ೩ ಪೊಲೀಸರಿಗೆ ಗಾಯ 

ಬಾಗಲಕೋಟ: ಕಬ್ಬು ಬೆಲೆ ನಿಗದಿ ವಿಚಾರವಾಗಿ ಸಕ್ಕರೆ ಕಾರ್ಖಾನೆಯ ಬಳಿ ನಡೆಯುತ್ತಿರುವ ಪ್ರತಿಭಟನೆ ವಿಕೋಪಕ್ಕೆ ತೆರಳಿ, ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಇನ್ಸಪೆಕ್ಟರ್ ಸೇರಿ ಮೂವರು ಪೊಲೀಸರಿಗೆ ಗಾಯವಾಗಿವೆ.

ಬಾಗಲಕೋಟದ ಸಮೀರವಾಡಿ ಸಕ್ಕರೆ ಕಾರ್ಖಾನೆ ಎದುರು ಕಬ್ಬು ಬೆಲೆ ನಿಗದಿ ವಿಚಾರವಾಗಿ ರೈತರ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾಕಾರರು ಎಸೆದ ಕಲ್ಲು ಸರ್ಕಲ್ ಪೊಲೀಸ್ ಇನ್ಸಪೆ​ಕ್ಟರ್ ಮಠಪತಿ ಎದೆಗೆ ಬಿದ್ದಿದ್ದು, ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಲ್ಲು ತೂರಾಟ ಹಾಗೂ ಕಬ್ಬು ಬೆಳೆಗಾರರ ಗದ್ದಲದಲ್ಲಿ ಕಾರ್ಖಾನೆಯ ಅನೇಕ ವಸ್ತುಗಳು ಜಖಂಗೊಂಡಿವೆ. ಕಾರ್ಖಾನೆ ಗೇಟ್, ಬಾಗಿಲು, ಕಿಟಕಿ, ಗಾಜುಗಳು ಹಾನಿಗೀಡಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಧಾವಿಸಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.