ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ನಿಜಾಮುದ್ದೀನ ರೈಲಿನಲ್ಲಿ 8 ಪ್ರಯಾಣಿಕರು ಮೂರ್ಛಾವಸ್ಥೆಯಲ್ಲಿ ಪತ್ತೆ; ಬೆಳಗಾವಿ ಆಸ್ಪತ್ರೆಗೆ ದಾಖಲು

ಬೆಳಗಾವಿ, ೧೧- ಗೋವಾದಿಂದ ದೆಹಲಿಗೆ ತೆರಳುತ್ತಿದ್ದ ವಾಸ್ಕೋ-ನಿಜಾಮುದ್ದೀನ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಧ್ಯ ಪ್ರದೇಶದ ಎಂಟು ಪ್ರಯಾಣಿಕರು ಮೂರ್ಛಾವಸ್ಥೆಯಲ್ಲಿ ಕಂಡು ಬಂದಿದ್ದು ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ.

ಒಂದೇ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಎಂಟೂ ಪ್ರಯಾಣಿಕರು ಲೋಂಡಾ ನಿಲ್ದಾಣ ಬಿಟ್ಟ ನಂತರ ಅವರೆಲ್ಲ ಒಂದೆರಡು ಬಾರಿ ವಾಂತಿ ಮಾಡಿಕೊಂಡರು. ನಂತರ ಮಲಗಿದವರು ಏಳಲೇ ಇಲ್ಲ. ಸಹ ಪ್ರಯಾಣಿಕರು ಎಬ್ಬಿಸಿದರೂ ಪ್ರತಿಕ್ರಿಯಿಸಲಿಲ್ಲ. ಹಾಗಾಗಿ ಪ್ರಯಾಣಿಕರು ಬೆಳಗಾವಿ ನಿಲ್ದಾಣ ತಲುಪಿದ ತಕ್ಷಣ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಪ್ರರೀಕ್ಷಿಸಿದಾದ ಅವರಲ್ಲರೂ ಬೇಷುದ್ದಾವಸ್ಥೆಯಲ್ಲಿದ್ದರು.

ತಕ್ಷಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಿ ನಂತರ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಎಂಟೂ ಪ್ರಯಾಣಿಕರು ದೆಹಲಿ ಸಮೀಪವಿರುವ ಮಧ್ಯ ಪ್ರದೇಶದ ಖಂಡ್ವಾ ಊರಿಗೆ ಹೋಗಲು ಟಿಕೆಟ್ ಕೊಂಡಿದ್ದರು.

ಕಲುಷಿತ ಆಹಾರ ಸೇವಿಸಿ ಈ ಪ್ರಕರಣ ಸಂಭವಿಸಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಅಸ್ವಸ್ಥರಾದವರಲ್ಲಿ ಓರ್ವನ ಸ್ಥಿತಿ ಚಿಂತಾಜಾನಕವಾಗಿದೆ. ಇವರೆಲ್ಲರೂ ಗೋವಾದಲ್ಲಿ ಕೆಲಸ ಮಾಡುತ್ತಿದ್ದರೆಂದು ತಿಳಿದು ಬಂದಿದೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.