LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಬೆಳಗಾವಿಯಲ್ಲಿ ಬಾಲಕನ ಮೇಲೆ ಬೀದಿ ನಾಯಿಯ ದಾಳಿ

ಬೆಳಗಾವಿ : ಬೀದಿ ನಾಯಿಯ ದಾಳಿಯಿಂದ ಮನೆಯ ಕಂಪೌಂಡ್ ಒಳಗೆ ಆಟವಾಡುತ್ತಿದ್ದ 5 ವರುಷದ ಬಾಲಕ ಗಾಯಗೊಂಡು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶುಕ್ರವಾರ ಅನಗೋಳದ ಇಂದಿರಾ ನಗರದಲ್ಲಿ ಸಂಭವಿಸಿದೆ.



ಶಿವರಾಜ ಮೌರ್ಯ ಎಂಬ ಬಾಲಕ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ವೇಳೆ ಬೀದಿ ನಾಯಿ ಬಾಲಕನ ಮೇಲೆ ದಾಳಿ ಮಾಡಿದೆ. ಬಾಲಕನ ಅರಚಾಟ ಕೇಳಿ ನೆರವಿಗೆ ಧಾವಿಸಿದ ಜನರು ನಾಯಿಯನ್ನು ಓಡಿಸಿ ಬಾಲಕನನ್ನು ರಕ್ಷಿಸಿದ್ದಾರೆ. ತೀವ್ರ ಗಾಯಗೊಂಡಿರುವ ಬಾಲಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.



ಪಾಲಿಕೆಯ ಮಾಜಿ ಸದಸ್ಯ ವಿನಾಯಕ ಗುಂಜಟ್ಕರ ಈ ಸಂದರ್ಭದಲ್ಲಿ ಮಾತನಾಡಿ, ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಹಲವಾರು ಬಾರಿ ಪಾಲಿಕೆಯ ಅಧಿಕಾರಿಗಳಿಗೆ ಬೀದಿ ನಾಯಿಗಳ ನಿಯಂತ್ರಣ ಮಾಡುವಂತೆ ಮನವಿ ಮಾಡಿಕೊಂಡರೂ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ. ಬಾಲಕನ ಕೂಗಾಟ ಕೇಳಿದ ಇಂದಿರಾ ನಗರದ ಜನರು ನಾಯಿಯಿಂದ ಬಾಲಕನನ್ನು ರಕ್ಷಣೆ ಮಾಡಿದ್ದಾರೆ. ಅನಗೋಳದ ಸರಕಾರಿ ಶಾಲೆಯ ಪಕ್ಕದಲ್ಲಿಯೇ ಬೀದಿ ನಾಯಿಗಳು ಹೆಚ್ಚಾಗಿವೆ ಎಂದರು.



ಪಾಲಿಕೆಯ ಅಧಿಕಾರಿಗಳು ಬೀದಿ ನಾಯಿಗಳ ಹಾವಳಿಯನ್ನು ತಪ್ಪಿಸಲು ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸಲಾಗುವುದು ಎಂದೂ ಅವರು ಎಚ್ಚರಿಸಿದರು.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹವಳದ ದಿಬ್ಬಗಳ ನಡುವೆ ರಾಹುಲ್ ಸಾಹಸರೂಪಾಯಿ 100 ತಲುಪಿದರೂ ಆತಂಕ ಬೇಡ ಎಂದ ಮೋದಿಯ ಆರ್ಥಿಕ ಸಲಹೆಗಾರ್ತಿ : ವ್ಯಾಪಕ ಟೀಕೆಅಮೂಲ್ಯ ಪರಿಸರ ಸಂಪತ್ತಿಗೆ ಬೆದರಿಕೆ ಒಡ್ಡಿದ ಯೋಜನೆ ಗ್ರೇಟ್ ನಿಕೋಬಾರ್ ಯೋಜನೆಭಿನ್ನಾಭಿಪ್ರಾಯ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದ ಸಿಎಂಖಾತೆ ಹಂಚಿಕೆ ಕಿಡಿ: ಮುನಿಯಪ್ಪ ಅಸಮಾಧಾನ, ಖಾತೆ ವಹಿಸಿಕೊಳ್ಳಲು ನಿರಾಕರಣೆಗುಂಡಿನ ದಾಳಿಗೆ ನಲುಗಿದ ಮಣಿಪುರ : ಮೂವರು ನಾಗರಿಕರ ಹತ್ಯೆ, 7 ಮನೆಗಳಿಗೆ ಬೆಂಕಿ ರೆಪೊ ದರದಲ್ಲಿ ಬದಲಾವಣೆ ಇಲ್ಲಖಾತೆ ಹಂಚಿಕೆ ಬಗ್ಗೆ ಅಸಮಾಧಾನ; ಸಚಿವ ಸ್ಥಾನ ತೊರೆದ ರಾಮಲಿಂಗಾ ರೆಡ್ಡಿಖಾತೆಗಳ ಹಂಚಿಕೆ ಕಸರತ್ತು ಪೂರ್ಣ, ಯಾರಿಗೆ ಯಾವ ಖಾತೆ? ಜೀವ ಉಳಿಸಿದ ಮಾನವೀಯತೆ : ದಿಲ್ಲಿ ಅಗ್ನಿ ದುರಂತದಲ್ಲಿ ಮುಸ್ಲಿಂ ಯುವಕರ ಸಾಹಸಕ್ಕೆ ವ್ಯಾಪಕ ಮೆಚ್ಚುಗೆ