LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಬೆಳಗಾವಿ ಬಳಿ ಮಹಿಳೆಯ ಬೆತ್ತಲೆ ಮೆರವಣಿಗೆ; ಕಂಬಕ್ಕೆ ಕಟ್ಟಿ ಥಳಿತ

ಬೆಳಗಾವಿ, 11: ಬೆಳಗಾವಿ ಸಮೀಪದ ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ಬೆತ್ತಲೆ ಮಾಡಿ ಗ್ರಾಮದಲ್ಲಿ ಮೆರವಣಿಗೆ ಮಾಡಿ ಕಂಬವೊಂದಕ್ಕೆ ಕಟ್ಟಿಹಾಕಿ ಥಳಿಸಿದ ಮನಕಲಕುವ ಅಮಾನವೀಯ ಘಟನೆ ರವಿವಾರ ರಾತ್ರಿ ನಡೆದಿದೆ.



ಪರಸ್ಪರ ಪ್ರೀತಿಸುತ್ತಿದ್ದ ಮಹಿಳೆಯ ಮಗ ದುಂಡಪ್ಪ ಅದೇ ಗ್ರಾಮದ ಪ್ರಿಯಾಂಕಾ ಎಂಬವಳೊಂದಿಗೆ ಓಡಿ ಹೋಗಿದ್ದರಿಂದ ಹುಡುಗಿಯ ಕುಟುಂಬದವರು ಹುಡುಗನ ತಾಯಿ 42 ವರ್ಷದ ಮಹಿಳೆಯೊಂದಿಗೆ ಈ ರೀತಿ ಅಮಾನವೀಯವಾಗಿ ವರ್ತಿಸಿದ್ದಾರೆ.



ಇಂದು ಪ್ರಿಯಾಂಕಾಳ ಮದುವೆಯ ನಿಶ್ಚಿತಾರ್ಥವಿತ್ತು.

ದುಂಡಪ್ಪ-ಪ್ರಿಯಾಂಕಾ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದು ನಿನ್ನೆ ರಾತ್ರಿ ಮನೆ ಬಿಟ್ಟು ಓಡಿ ಹೋಗಿದ್ದಾರೆ.



ಇದರಿಂದ ರೊಚ್ಚಿಗೆದ್ದ ಯುವತಿಯ ಕುಟುಂಬಸ್ಥರು ಯುವಕನ ಮನೆ ಮೇಲೆ ದಾಳಿ ಮಾಡಿ ಮನೆಯನ್ನು ಸಂಪೂರ್ಣ ಧ್ವಂಸಗೊಳಿಸಿ ಕೆಡವಿದ್ದಾರೆ. ತಡರಾತ್ರಿ ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿದರು.



ಪ್ರಕರಣ ಸಂಬಂಧ ಏಳು ಜನರನ್ನು ಬಂಧಿಸಲಾಗಿದ್ದು

ಗ್ರಾಮದಲ್ಲಿ ಎರಡು ಕೆ ಎಸ್ ಆರ್ ಪಿ ಪೊಲೀಸ್ ತುಕಡಿಗಳನ್ನು ಬಂದೋಬಸ್ತಗೆ ನಿಯೋಜಿಸಲಾಗಿದೆ.



ಉತ್ತರ ಪ್ರದೇಶ, ಬಿಹಾರಗಳಂಥ ರಾಜ್ಯಗಳಲ್ಲಿ ಇಂಥ ಹೇಯ ಘಟನೆಗಳ ಬಗ್ಗೆ ಕೇಳುತ್ತಿದ್ದೇವಾದರೂ ರಾಜ್ಯದಲ್ಲಿಯೂ ಇಂಥ ಘಟನೆ ನಡೆದಿದೆ. ಇಂದಿನ ದಿನಗಳಲ್ಲಿ ಅಪರಾಧಿಗಳಿಗೆ ಪೊಲೀಸ ಮತ್ತು ನ್ಯಾಯಾಂಗದ ಹೆದರಿಕೆಯೇ ಇಲ್ಲದಂತಾಗಿದ್ದು ದುರ್ದೈವ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ಬಿಡೊಲ್ಲ: ರಾಜನಾಥ ಸಿಂಗ್ಪರಾರಿ ನೀರವ ಮೋದಿ ಪ್ರಕರಣಕ್ಕೆ ತಿರುವು: ಭ್ರಷ್ಟಾಚಾರದ ಸಾಕ್ಷ್ಯ ಇಲ್ಲ ಎಂದ ಸಿಬಿಐನೀಟ್ ಅಕ್ರಮ, ನಿರುದ್ಯೋಗ ವಿರುದ್ಧ ಕಾಂಗ್ರೆಸ್ ರಣಕಹಳೆ: ರಾಹುಲ್ ನೇತೃತ್ವದಲ್ಲಿ ವಿದ್ಯಾರ್ಥಿ ಸಮಾವೇಶಜೀವ ಕಳೆದುಕೊಂಡ ನಾವಿಕರು, ಧ್ವನಿ ಕಳೆದುಕೊಂಡ ನಾಯಕತ್ವಭಾರತೀಯ ನಾವಿಕರ ಹತ್ಯೆಯ ಕಾವಿನ ನಡುವೆ ಫ್ರಾನ್ಸ, ಸ್ಲೋವೇಕಿಯಾ ದೇಶಗಳ ೧ ವಾರದ ಪ್ರವಾಸಕ್ಕೆ ತೆರಳಿದ ಪ್ರಧಾನಿ ಮೋದಿರೈತರ ಜಮೀನು ಕಬಳಿಸುವ ಯತ್ನ: ಆರ್‌.ಅಶೋಕ ಆರೋಪ4 ಗೋಲುಗಳ ದಾಳಿಯಿಂದ ಅಮೆರಿಕದ ಶುಭಾರಂಭಮಣಿಪುರದಲ್ಲಿ ದಿಗ್ಬಂಧನ: ಪೆಟ್ರೋಲ್ ₹230, ಅಡುಗೆ ಅನಿಲ ₹5,000ಕಾಗದದ ಕಡತಗಳಿಗೆ ವಿದಾಯ: ಪಾಲಿಕೆ ಪಿಐಡಿ ಸೇವೆ ಸಂಪೂರ್ಣ ಆನ್‌ಲೈನ್‌ಗೆಮಾಡೆಲ್ ಲಗೇಜ್‌ನಲ್ಲಿ 11.82 ಕೋಟಿ ರೂ. ಮೌಲ್ಯದ ಗಾಂಜಾ ಪತ್ತೆ