ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಯತ್ನಾಳ ಪರ ಅಶ್ವಥ ನಾರಾಯಣ ಬ್ಯಾಟಿಂಗ್

ಬೆಳಗಾವಿ, ೫:  ಬಿಜೆಪಿಯಲ್ಲಿನ ಗುಂಪುಗಾರಿಕೆ ಬೆಳಕಿಗೆ ಬರುತ್ತಿದ್ದು ಮಾಜಿ ಉಪ ಮುಖ್ಯಮಂತ್ರಿ ಅಶ್ವಥ ನಾರಾಯಣ ಅವರು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರ ಮಾತನಾಡಿದ್ದಾರೆ. ಬಿಜೆಪಿ ಆರ್ ಅಶೋಕ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ನೇಮಿಸಿದ ನಂತರ ಯತ್ನಾಳ ಅವರು ಪಕ್ಷದ ಮುಖಂಡರ ವಿರುದ್ಧ ನಿತ್ಯ ಹೇಳಿಕೆ ನೀಡುತ್ತಿದ್ದಾರೆ. ಅಶೋಕ ಅವರಿಗಿಂತ ಯತ್ನಾಳ ಹೆಚ್ಚು ಶಾಸಕರ ಬೆಂಬಲ ಹೊಂದಿದ್ದಾರೆ, ಆದರೆ ಆರ್ ಅಶೋಕ ಅವರಿಗೆ ಅವರೇ ಸಾಟಿ ಎಂದು ಗೋಡೆಯ ಮೇಲೆ ದೀಪ ಇಟ್ಟಂತೆ ಅ‍ಶ್ವಥ ನಾರಾಯಣ ಹೇಳಿಕೆ ನೀಡಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತ‌ನಾಡಿದ ಅವರು, ವಿರೋಧ ಪಕ್ಷ ನಾಯಕ ಆರ್ ಅಶೋಕರಿಗಿಂತ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಹೆಚ್ಚಿನ ಶಾಸಕರು ಬೆಂಬಲ ಕೊಡುತ್ತಿರುವ ಪ್ರಶ್ನೆಗೆ ಉತ್ತರಿಸಿದ ಅವರು, "ನಮ್ಮ ಶಾಸಕರು ಯತ್ನಾಳ ಅವರ ಬಳಿ ತಮ್ಮ ಸಮಸ್ಯೆ ಹೇಳಿಕೊಂಡರೆ ತಪ್ಪೇನು, ಅಶೋಕಗಿಂತ ಯತ್ನಾಳ ಅವರಿಗೆ ಹೆಚ್ಚು ಶಾಸಕರ ಬೆಂಬಲಯಿದೆ. ಯತ್ನಾಳ ಯತ್ನಾಳನೆ, ಆದರೆ ಅಶೋಕ ಅಶೋಕನೇ" ಎಂದರು.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.