ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಮುರುಘಾ ಮಠದಲ್ಲಿ ಸ್ಥಳ ಮಹಜರ್ ವೇಳೆ ಬಿಕ್ಕಿ ಬಿಕ್ಕಿ ಅತ್ತ ಶ್ರೀಗಳು 

ಚಿತ್ರದುರ್ಗ: ಪೋಕ್ಸೋ ಕೇಸ್ ಸಂಬಂಧ ಸ್ಥಳ ಮಹಜರಿಗೆ ಪೊಲೀಸರು ಶ್ರೀಗಳನ್ನು ಮಠಕ್ಕೆ ಕರೆದೊಯ್ದಿದ್ದಾರೆ. ಈ ವೇಳೆ ಶರಣರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಅಲ್ಲದೇ ಶಿಷ್ಯ ವೃಂದವು ಸಹ ಸ್ವಾಮೀಜಿ ಪರಿಸ್ಥಿತಿ ಕಂಡು ಕಣ್ಣೀರಿಟ್ಟಿರುವುದಾಗಿ ತಿಳಿದು ಬಂದಿದೆ. ಸ್ಥಳ ಮಹಜರಿಗಾಗಿ ಮುರುಘಾ ಮಠಕ್ಕೆ ಕರೆದೊಯ್ಯಲಾಯಿತು. ಮುರುಘಾ ಮಠದಲ್ಲಿ ಗದ್ದುಗೆ, ಪೂಜಾ ಸ್ಥಳಗಳಿಗೆ ತೆರಳಿ, ಮುರುಘಾ ಶರಣರು ನಮಸ್ಕರಿಸಿದರು.

ಸ್ವಾಮೀಜಿ ಬಳಸುತ್ತಿದ್ದ ಎಲ್ಲಾ ಕೊಠಡಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸ್ಥಳ ಮಹಜರ್ ನಡೆಸಲಾಯಿತು. ಮಠದ ಕಚೇರಿಗೆ ಕೂಡ ಭೇಟಿ ನೀಡಲಾಯಿತು. ಸ್ಥಳ ಮಹಜರ್ ವೇಳೆಯಲ್ಲಿ 15ಕ್ಕೂ ಹೆಚ್ಚು ಸ್ವಾಮೀಜಿಗಳಿದ್ದರು.

ಸತತ ಒಂದೂವರೆ ಗಂಟೆಗಳ ಕಾಲ ಮಾಹಿತಿಯನ್ನು ಎಸ್ ಪಿ ಮತ್ತು ಡಿವೈಎಸ್ ಪಿ ಪಡೆದಿದ್ದಾರೆ. ಇದಲ್ಲದೇ ಅವರ ವಾಸ್ತವ್ಯದ ಕೊಠಡಿಗೆ ಕರೆದೊಯ್ದು ಕೂಡ ಮುರುಘಾ ಶರಣರಿಂದ ಮಾಹಿತಿಯನ್ನು ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.