ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬಿಜೆಪಿ ದಿನನಿತ್ಯ ಸಂವಿಧಾನವನ್ನು ಕೊಲ್ಲುತ್ತಿದೆ : ರಾಹುಲ್ ಗಾಂಧಿ

ಮುಂಬೈ : ಬಿರ್ಸಾ ಮುಂಡಾ ಅವರು ಸಾವರ್ಕರ ಅವರಂತೆ ಬ್ರಿಟಿಷರಿಗೆ ತಲೆಬಾಗಲಿಲ್ಲ, ಅವರು ಹುತಾತ್ಮರಾದರು. ಹಿಂದುತ್ವ ಸಿದ್ಧಾಂತಿ ಸಾವರ್ಕರ ಅವರು ಬ್ರಿಟಿಷರ ಪರವಾಗಿ ಕೆಲಸ ಮಾಡುತ್ತಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಭಾರತ ಜೋಡೋ ಯಾತ್ರೆ 69ನೇ ದಿನಕ್ಕೆ ತಲುಪಿದ್ದು, ಹಿಂಗೋಲಿಯಿಂದ ಮಹಾರಾಷ್ಟ್ರದ ವಿದರ್ಭ ಪ್ರದೇಶದ ವಾಶಿಮ್ ಜಿಲ್ಲೆಯನ್ನು ತಲುಪಿದೆ.

ಈ ವೇಳೆ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮದಿನದಂದು ಮಧ್ಯಾಹ್ನ ರಾಹುಲ್ ಗಾಂಧಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.  ಈ ವೇಳೆ ದಲಿತರು, ಬುಡಕಟ್ಟು ಜನರು ಮತ್ತು ಬಡವರಿಗೆ ಹಕ್ಕುಗಳು ಸಿಗಬೇಕು ಎಂದು ಒಪ್ಪಿಕೊಳ್ಳಲು ಬಯಸದ ಬಿಜೆಪಿ ಪ್ರತಿ ದಿನ ಸಂವಿಧಾನದ ಮೇಲೆ ದಾಳಿ ನಡೆಸಿದೆ ಎಂದರು.

ಕಾಂಗ್ರೆಸ್ ಮಾತ್ರ ಸಂವಿಧಾನವನ್ನ ರಕ್ಷಿಸಲು, ಬುಡಕಟ್ಟು ಜನರಿಗೆ ಶಿಕ್ಷಣ ನೀಡಲು ಮತ್ತು ಅವರ ಭೂಮಿ ಮತ್ತು ಹಕ್ಕುಗಳನ್ನ ರಕ್ಷಿಸಲು ಸಾಧ್ಯ. ಬಿರ್ಸಾ ಮುಂಡಾ ಮತ್ತು ಸಾವರ್ಕರ ನಡುವೆ ಹೋಲಿಕೆ ಮಾಡಲು ಪ್ರಯತ್ನಿಸಿದರು, ಬಿರ್ಸಾ ಮುಂಡಾ ಅವರ ಆದರ್ಶಗಳ ಬಗ್ಗೆ ದೃಢವಾಗಿದ್ದರು ಎಂದು ಹೇಳಿದರು.

ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಬುಡಕಟ್ಟು ಹೆಮ್ಮೆಯ ದಿನವಾಗಿ ಆಚರಿಸಲಾಗುತ್ತದೆ. ಅವರು ಒಂದು ಇಂಚು ಕೂಡ ಹಿಂದೆ ಸರಿಯದೇ ಹುತಾತ್ಮರಾದರು.

ಸಾವರ್ಕರ ತಮ್ಮ ಬಗ್ಗೆ ಬೇರೆ ಹೆಸರಿನಲ್ಲಿ ಒಂದು ಪುಸ್ತಕವನ್ನು ಬರೆದಿದ್ದಾರೆ ಮತ್ತು ಅವರು ಎಷ್ಟು ಧೈರ್ಯಶಾಲಿಯಾಗಿದ್ದರು ಎಂದು ಗಾಂಧಿ ಪ್ರತಿಪಾದಿಸಿದರು. ಅವರು ಬ್ರಿಟಿಷರಿಂದ ಪಿಂಚಣಿ ಪಡೆಯುತ್ತಿದ್ದರು, ಅವರಿಗಾಗಿ ಕೆಲಸ ಮಾಡುತ್ತಿದ್ದರು ಮತ್ತು ಕಾಂಗ್ರೆಸ್ ವಿರುದ್ಧ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.