LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
State News

ಭಿನ್ನಾಭಿಪ್ರಾಯ ಅಪರಾಧವಲ್ಲ : ಹೈಕೋರ್ಟ

ಮಂಗಳೂರು, ಅ. 23 (ಸಮದರ್ಶಿ ಸುದ್ದಿ): ಬಾಬರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ ತೀರ್ಪನ್ನು ವಿರೋಧಿಸಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ್ದಕ್ಕಾಗಿ 13 ಜನರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ ರದ್ದುಗೊಳಿಸಿದೆ. ನ್ಯಾಯಾಲಯದ ತೀರ್ಪಿನ ಬಗ್ಗೆ ಅಸಮಾಧಾನ ಅಥವಾ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದನ್ನು ಮಾತ್ರ ಅಪರಾಧವೆಂದು ಪರಿಗಣಿಸಲಾಗದು ಎಂದು ನ್ಯಾಯಮೂರ್ತಿ ಎಚ್.ಪಿ. ಸಂದೇಶ ಸ್ಪಷ್ಟಪಡಿಸಿದ್ದಾರೆ.

ಅಕ್ಟೋಬರ್ 15ರಂದು ನೀಡಿರುವ ಆದೇಶದಲ್ಲಿ, ನ್ಯಾಯಾಂಗದ ತೀರ್ಪನ್ನು ಪ್ರಶ್ನಿಸುವುದಕ್ಕೂ ಸಮಾಜದಲ್ಲಿ ದ್ವೇಷ ಅಥವಾ ವೈಷಮ್ಯ ಪ್ರಚೋದಿಸುವುದಕ್ಕೂ ವ್ಯತ್ಯಾಸವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

2019ರಲ್ಲಿ ಬಾಬರಿ ಮಸೀದಿ ಭೂ ವಿವಾದದ ಕುರಿತು ಸುಪ್ರೀಂ ಕೋರ್ಟ ತೀರ್ಪು ಪ್ರಕಟಿಸಿದ ಬಳಿಕ ಮಂಗಳೂರಿನಲ್ಲಿ ಅದನ್ನು ವಿರೋಧಿಸಿ ಭಿತ್ತಿಪತ್ರಗಳನ್ನು ಹಾಕಲಾಗಿತ್ತು. ಈ ಸಂಬಂಧ ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ನವೆಂಬರ್ 16ರಂದು ಮುಹಮ್ಮದ್ ಹನೀಫ್ ಸೇರಿದಂತೆ 13 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ ಮತ್ತು 295ಎ ಅಡಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಹಾಗೂ ಸಮುದಾಯಗಳ ನಡುವೆ ವೈಷಮ್ಯ ಉಂಟುಮಾಡಲು ಯತ್ನಿಸಿದ ಆರೋಪ ಹೊರಿಸಲಾಗಿತ್ತು.

ಪ್ರಕರಣ ಪ್ರಶ್ನಿಸಿ ಹೈಕೋರ್ಟ ಮೆಟ್ಟಿಲೇರಿದ್ದ ಅರ್ಜಿದಾರರ ಪರ ವಕೀಲ ಇಸ್ಮಾಯಿಲ್ ಮುನೀಬ್ ಮುಸ್ಬಾ, ನ್ಯಾಯಾಲಯದ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವುದು ಸಂವಿಧಾನದ 19ನೇ ವಿಧಿಯಡಿ ದೊರೆಯುವ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿದೆ ಎಂದು ವಾದಿಸಿದರು.

ಸುಪ್ರೀಂ ಕೋರ್ಟ 2024ರಲ್ಲಿ ನೀಡಿದ್ದ ಜಾವೇದ್ ಅಹ್ಮದ್ ಹಜಮ್ ಪ್ರಕರಣದ ತೀರ್ಪನ್ನು ಉಲ್ಲೇಖಿಸಿ, ಯಾವುದೇ ಹೇಳಿಕೆಯನ್ನು ಅಪರಾಧವೆಂದು ಪರಿಗಣಿಸಲು ಕಾನೂನಿನಲ್ಲಿ ನಿರ್ದಿಷ್ಟಪಡಿಸಿರುವ ಅಂಶಗಳು ಇರಬೇಕು ಎಂದು ಪ್ರತಿಪಾದಿಸಿದರು.

ವಾದಗಳನ್ನು ಪರಿಶೀಲಿಸಿದ ಹೈಕೋರ್ಟ, ಭಿತ್ತಿಪತ್ರಗಳಲ್ಲಿ ನ್ಯಾಯ ನಿರಾಕರಣೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆಯೇ ಹೊರತು ಸಮುದಾಯಗಳ ನಡುವೆ ದ್ವೇಷ ಹರಡುವ ಅಥವಾ ಧಾರ್ಮಿಕ ಭಾವನೆಗಳಿಗೆ ಉದ್ದೇಶಪೂರ್ವಕವಾಗಿ ಧಕ್ಕೆ ತರುವ ಅಂಶಗಳಿಲ್ಲ ಎಂದು ತಿಳಿಸಿದೆ.

ಯಾವುದೇ ಅಭಿಪ್ರಾಯ ಕೆಲವರಿಗೆ ಅಸಮಾಧಾನ ಉಂಟುಮಾಡಬಹುದು ಎಂಬ ಕಾರಣಕ್ಕೆ ಮಾತ್ರ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಸಮರ್ಥನೀಯವಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, 13 ಜನರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಮತದಾನ; ಅ.27ರಂದು ಮತ ಎಣಿಕೆಕರ್ನಾಟಕದಲ್ಲಿ 43.82 ಲಕ್ಷ ಎಸ್‌ಐಆರ್ ನೋಟಿಸ್‌ಗಳ ವಿಚಾರಣೆ ಪೂರ್ಣ; ಅ.27ಕ್ಕೆ ಅಂತಿಮ ಮತದಾರರ ಪಟ್ಟಿಸ್ಟಿಂಗ್ ಕಾರ್ಯಾಚರಣೆ : ಪವರ್ ಟಿವಿ ಮುಖ್ಯಸ್ಥ ಶೆಟ್ಟಿಗೆ ನಿರೀಕ್ಷಣಾ ಜಾಮೀನುಎಂಎಲ್‌ಸಿ ಚುನಾವಣೆಯಲ್ಲಿ ಅಕ್ರಮ : ಸಮಾಜವಾದಿ ಪಕ್ಷಭಿನ್ನಾಭಿಪ್ರಾಯ ಅಪರಾಧವಲ್ಲ : ಹೈಕೋರ್ಟಎಸ್ಐಆರ್ ರದ್ದತಿಗೆ ಆಗ್ರಹಿಸಿ ದಲಿತ, ರೈತ, ಕಾರ್ಮಿಕ ಸಂಘಟನೆಗಳ ಒಗ್ಗಟ್ಟಿನ ಪ್ರತಿಭಟನೆಎಸ್ಐಆರ್ ಸ್ಥಗಿತಕ್ಕೆ ಆಗ್ರಹಿಸಿ ಮುಂದುವರಿದ ಪ್ರತಿಭಟನೆ: ಹಲವರು ಪೊಲೀಸ್ ವಶಕ್ಕೆಮಸೀದಿ ಧ್ವಂಸಕ್ಕೆ ಆಕ್ಷೇಪ: ಕಚ್ ಜಿಲ್ಲಾಧಿಕಾರಿಗೆ ಹೈಕೋರ್ಟ ಸಮನ್ಸಸ್ಟಿಂಗ್ ಕಾರ್ಯಾಚರಣೆ ಹಿಂದೆ ಕೃಪಾ ಆಳ್ವಾ, ರಾಕೇಶ ಶೆಟ್ಟಿ: ಸಿದ್ದರಾಮಯ್ಯಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಕಾರ್ಯಾಚರಣೆಯಲ್ಲಿ ಕಾಂಗ್ರೆಸ್‌ನವರ ಕೈವಾಡ: ಯತೀಂದ್ರ ಆರೋಪ