ತಮ್ಮ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ, ದಿನಬೆಳಗಾದರೆ ಒಂದಿಲ್ಲೊಂದು ನೋಟೀಸ, ದಾಳಿ, ಕೋರ್ಟ, ಕಚೇರಿ ನಡೆದಿದೆ. ಐಟಿ, ಇಡಿ, ಸಿಬಿಐ ಎಲ್ಲಾ ತನಿಖಾ ಸಂಸ್ಥೆಗಳು ದೂರು ದಾಖಲಿಸಿಕೊಂಡು ದಾಳಿ ನಡೆಸುತ್ತಿವೆ. ತನಿಖಾ ಸಂಸ್ಥೆಗಳು ನಿರಂತರವಾಗಿ ಕಿರುಕುಳ ಕೊಡುತ್ತಿವೆ. ಎಷ್ಟು ಕಿರುಕುಳ ಕೊಡುತ್ತಾರೆ ಕೊಡಲಿ. ನಾನು ಯಾವುದೇ ತಪ್ಪು ಮಾಡಿಲ್ಲ. ಎಲ್ಲಾ ದಾಖಲೆಗಳು ಕಾನೂನಾತ್ಮಕ ಆಗಿವೆ, ಭಯ ಪಡುವ ಅಗತ್ಯವಿಲ್ಲ ಎಂದರು.
40 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಹೆದರಿಸಬೇಕು ಅಂತಾ ಹೆದರಿಸುತ್ತಿದ್ದಾರೆ. ಪ್ರತಿದಿನ ಒಂದಿಲ್ಲೊಂದು ನೋಟೀಸ್. ತೊಂದರೆ ಕೊಡಲೆಂದೇ ನನ್ನ ಮೇಲೆ ದಾಳಿ ಮಾಡುತ್ತಿದ್ದಾರೆ. ಅವರು ಯಾವ ದಾಳಿ ಬೇಕಾದರೂ ಮಾಡಲಿ, ಯಾವುದಕ್ಕೂ ಹೆದರುವುದಿಲ್ಲ. ಎಲ್ಲವನ್ನೂ ಎದುರಿಸಿ ನಿಲ್ಲುತ್ತೇನೆ ಎಂದು ಶಿವಕುಮಾರ ಹೇಳಿದ್ದಾರೆ.








