LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಶಾಂತಿ ಕದಡುವ ಪ್ರಯತ್ನ ಬೇಡ: ಬಿಜೆಪಿ ನಾಯಕರ ವಿರುದ್ಧ ಬಾಲಕೃಷ್ಣ ವಾಗ್ದಾಳಿ

ರಾಮನಗರ, ಸೆ. 15 : ಟಿ.ನರಸೀಪುರದಲ್ಲಿ ಇನ್ಸ್‌ಪೆಕ್ಟರ್ ವಿರುದ್ಧ ಬಿಜೆಪಿ ನಾಯಕರು ನಡೆಸುತ್ತಿರುವ ಪ್ರತಿಭಟನೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಬಾಲಕೃಷ್ಣ ತೀವ್ರ ವಾಗ್ದಾಳಿ ನಡೆಸಿದ್ದು, ಮಸೀದಿ ಬಳಿ ಪಟಾಕಿ ಹಚ್ಚಿ ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ.

ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಸರ್ವಜನಾಂಗದ ಶಾಂತಿಯ ತೋಟ. ಎಲ್ಲ ಸಮುದಾಯದ ಜನರೂ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಆದರೆ ಬಿಜೆಪಿ ನಾಯಕರು ವಿನಾಕಾರಣ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮೆರವಣಿಗೆ ವೇಳೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಮತ್ತು ನಿಯಮಗಳನ್ನು ಜವಾಬ್ದಾರಿಯಿಂದ ಪಾಲಿಸುವಂತೆ ಇನ್ಸ್‌ಪೆಕ್ಟರ್ ಸೂಚಿಸಿದ್ದರು. ಆದರೆ ಅವರ ಹೇಳಿಕೆಯ ಕೆಲವು ಭಾಗಗಳನ್ನು ಕತ್ತರಿಸಿ ಜೋಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗಿದೆ ಎಂದು ಬಾಲಕೃಷ್ಣ ಹೇಳಿದರು.

ಯಾವುದೇ ಸಂಘರ್ಷ ನಡೆಯಬಾರದು ಎಂಬುದೇ ಪೊಲೀಸ್ ಇಲಾಖೆಯ ಉದ್ದೇಶ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ‘ಅನ್ಯ ಧರ್ಮೀಯರು ಆರ್. ಅಶೋಕ ಹಾಗೂ ಪ್ರತಾಪ ಸಿಂಹ ಅವರ ಮನೆ ಮುಂದೆ ಬಂದು ಪಟಾಕಿ ಹಚ್ಚಿ, ಡಿಜೆ ಹಾಕಿದರೆ ನೀವು ಸುಮ್ಮನಿರುತ್ತೀರಾ?’ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.

ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳನ್ನು ನೆಪವಾಗಿಟ್ಟುಕೊಂಡು ಅನಗತ್ಯ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಬಾಲಕೃಷ್ಣ ಹೇಳಿದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯುಪಿಐ ಶುಲ್ಕ ಜನರ ಜೇಬಿನ ಮೇಲೆ ‘ಸರ್ಜಿಕಲ್ ಸ್ಟ್ರೈಕ್’: ಸಚಿವ ಶಿವರಾಜ ತಂಗಡಗಿ ಟೀಕೆ‘ವಂದೇ ಮಾತರಂ’ ಪೂರ್ಣ ಹಾಡಿದರೆ ರಾಜೀನಾಮೆ: ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ಸವಾಲುರೈಲ್ವೆ ಯೋಜನೆಗೆ ಭೂಸ್ವಾಧೀನ: ಎಕರೆಗೆ ₹1 ಕೋಟಿ ಪರಿಹಾರಕ್ಕೆ ರೈತರ ಆಗ್ರಹಲಾಡ್ಜನಲ್ಲಿ ಯುವತಿ ಅನುಮಾನಾಸ್ಪದ ಸಾವು₹2 ಸಾವಿರಕ್ಕಿಂತ ಹೆಚ್ಚಿನ ಯುಪಿಐ ವ್ಯಾಪಾರಿ ಪಾವತಿಗೆ ಶೇ 0.4 ಎಂಡಿಆರ್ರಾಸಾಯನಿಕ ಮಿಶ್ರಿತ ಬಣ್ಣದ ಅಡಿಕೆ ಅಕ್ರಮ ಸಾಗಣೆ; ಕಂಟೈನರ್ ಜಪ್ತಿ, ಇಬ್ಬರು ವಶಕ್ಕೆಮಣಿಪುರದಲ್ಲಿ ಮತ್ತೆ ಹಿಂಸಾಚಾರ: ನಾಗಾ ಗ್ರಾಮದ ಮೇಲೆ ಉಗ್ರರ ದಾಳಿ, ಎರಡು ಮನೆಗಳಿಗೆ ಬೆಂಕಿಯುಪಿಐ ವಹಿವಾಟಿಗೆ ಎಂಡಿಆರ್: ‘ಅಮೆರಿಕದ ಒತ್ತಡಕ್ಕೆ ಕೇಂದ್ರ ಮಣಿದಿದೆ’ ಎಂದು ಕಾಂಗ್ರೆಸ್ ಆರೋಪವಾಯುಮಾಲಿನ್ಯದಿಂದ ಆತ್ಮಹತ್ಯೆ ಆಲೋಚನೆ, ಸಾವಿನ ಅಪಾಯ ಹೆಚ್ಚಳ: ಅಧ್ಯಯನಮೆಕ್ಕಾ ಮೇಲೆ ಹೂಥಿ ಡ್ರೋನ್ ದಾಳಿ ಯತ್ನ ವಿಫಲ; ಮೆಕ್ಕಾ, ಜೆಡ್ಡಾ, ತಾಯಿಫ್‌ನಲ್ಲಿ ಹೈ ಅಲರ್ಟ್