ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕೃಷ್ಣ ಜನ್ಮಭೂಮಿಯ ವೀಡಿಯೊಗ್ರಾಫಿ ಸಮೀಕ್ಷೆ ನಡೆಸಲು ಹೈಕೋರ್ಟ ಆದೇಶ

ಹೊಸದಿಲ್ಲಿ : ವಿವಾದಿತ ಮಥುರಾದ ಕೃಷ್ಣ ಜನ್ಮಭೂಮಿ ಮತ್ತು ಷಾಹಿ ಈದ್ಗಾ ಮಸೀದಿ ವೀಡಿಯೊಗ್ರಾಫಿ ಸಮೀಕ್ಷೆಯನ್ನು ನಡೆಸಲು ಅಲಹಾಬಾದ ಹೈಕೋರ್ಟ ಆದೇಶ ನೀಡಿದ್ದು, ನಾಲ್ಕು ತಿಂಗಳಲ್ಲಿ ಸಮೀಕ್ಷಾ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ.

ಸಮೀಕ್ಷೆಗಾಗಿ ಒಬ್ಬ ಹಿರಿಯ ವಕೀಲರನ್ನು ಆಯುಕ್ತರಾಗಿ ಮತ್ತು ಇಬ್ಬರು ವಕೀಲರನ್ನು ಸಹಾಯಕ ಆಯುಕ್ತರಾಗಿ ನೇಮಿಸಲಾಗುವುದು. ಸಮೀಕ್ಷೆಯ ಸಮಯದಲ್ಲಿ ವಾದಿಗಳು ಮತ್ತು ಪ್ರತಿವಾದಿಗಳು ಸಹ ಉಪಸ್ಥಿತರಿರುತ್ತಾರೆ. ಅಲ್ಲದೇ, ಜಿಲ್ಲೆಯ ಅಧಿಕಾರಿಗಳು ಸಹ ಸ್ಥಳದಲ್ಲೇ ಇರುತ್ತಾರೆ ಎಂದು ಅಲಹಾಬಾದ ಹೈಕೋರ್ಟ ನ್ಯಾಯಮೂರ್ತಿ ಪಿಯೂಷ ಅಗರ್ವಾಲ ಅವರ ಪೀಠವು ಈ ಆದೇಶ ಹೊರಡಿಸಿದೆ.

ಅಲಹಾಬಾದ ಹೈಕೋರ್ಟ ಶ್ರೀಕೃಷ್ಣ ಜನ್ಮಸ್ಥಾನ ಮತ್ತು ಷಾಹಿ ಈದಗಾ ಮಸೀದಿ ವಿವಾದ ಪ್ರಕರಣದ ವಿಚಾರಣೆ ನಡೆಸಿದ್ದು, ಸದ್ಯ ಸಮೀಕ್ಷೆ ನಡೆಸುವಂತೆ ಹೈಕೋರ್ಟ ಜಿಲ್ಲಾ ನ್ಯಾಯಾಲಯಕ್ಕೆ ಆದೇಶಿಸಿದೆ.

ಕೃಷ್ಣ ಜನ್ಮಸ್ಥಳದ ಪ್ರಮುಖ ಪಕ್ಷಕಾರ ಮನೀಶ ಯಾದವ ಕಳೆದ ವರ್ಷ ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ ವಿವಾದಿತ ಆವರಣಗಳ ವೈಜ್ಞಾನಿಕ ಸಮೀಕ್ಷೆ ಮತ್ತು ಮೇಲ್ವಿಚಾರಣೆಗಾಗಿ ನ್ಯಾಯಾಲಯದ ಆಯುಕ್ತರನ್ನು ನೇಮಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.