LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

400 ರೂ. ಲಂಚ ಪಡೆದ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ

ಬೆಂಗಳೂರು, ೨೬- ಲಂಚ ಪಡೆದ ಪ್ರಕರಣದಲ್ಲಿ ದ್ವಿತೀಯ ದರ್ಜೆ ಗುಮಾಸ್ತನನ್ನು ಕಡ್ಡಾಯ ನಿವೃತ್ತಿಗೊಳಿಸಿ ಆದೇಶಿಸಿದ್ದ ನಗರಾಭಿವೃದ್ಧಿ ಇಲಾಖೆಯ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಇದನ್ನು ರದ್ದುಪಡಿಸಲು ಕೋರಿದ್ದ ಗುಮಾಸ್ತನ ಅರ್ಜಿಯನ್ನು ವಜಾಗೊಳಿಸಲಾಗಿದೆ.



ಪ್ರಕರಣದ ವಿವರ: ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಬಸವರಾಜ ಸಂಗಪ್ಪ ಗಾಣಿಗೇರಾ ಎಂಬವರು ತಮ್ಮ ನಿವೇಶನದಲ್ಲಿ ಶೆಡ್ ನಿರ್ಮಿಸುವ ಸಲುವಾಗಿ ಅನುಮತಿ ಕೋರಿದ್ದು, ಈ ವೇಳೆ ಕುಷ್ಟಗಿ ಪುರಸಭೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿದ್ದ ನರಸಿಂಹಲು ಅವರಿಂದ 400 ರೂಪಾಯಿ ಲಂಚ ಪಡೆದಿದ್ದರು.



2008ರ ಅಕ್ಟೋಬರ್ 3ರಂದು ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ವಿಚಾರಣೆಯಲ್ಲೂ ಇದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಿ ಆದೇಶ ಹೊರಡಿಸಲಾಗಿತ್ತು.



ಇದನ್ನು ಪ್ರಶ್ನಿಸಿ ನರಸಿಂಹಲು ಹೈಕೋರ್ಟ ಮೆಟ್ಟಿಲೇರಿದ್ದು, ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಜಿ. ಪಂಡಿತ್ ಅವರ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದ್ದು ನಗರಾಭಿವೃದ್ಧಿ ಇಲಾಖೆಯ ಕ್ರಮವನ್ನು ಎತ್ತಿ ಹಿಡಿದಿದೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲಾಠಿಚಾರ್ಜ ವಿಡಿಯೋ ನೋಡಲು ಸಮಯವಿಲ್ಲ : ಸುಪ್ರೀಮ ಕೋರ್ಟರೈತ ಹುತಾತ್ಮರ ದಿನಾಚರಣೆಯಲ್ಲಿ ಕಳಸಾ–ಬಂಡೂರಿ ಯೋಜನೆಗೆ ವೇಗ ನೀಡುವಂತೆ ಆಗ್ರಹವಾಟ್ಸಪ್ ಮದುವೆ ಆಹ್ವಾನದ ಎಪಿಕೆ ಫೈಲ್ ಕ್ಲಿಕ್ ಮಾಡಿ ₹10 ಲಕ್ಷ ಕಳೆದುಕೊಂಡ ಅಧಿಕಾರಿಮುಖ್ಯಮಂತ್ರಿ ಪ್ರವಾಸದಲ್ಲಿ ವೈದ್ಯಕೀಯ ಭದ್ರತಾ ಲೋಪ: ಡಿಎಚ್ಒಗೆ ಶೋಕಾಸ್ ನೋಟಿಸ್ಗಡಿ ಕನ್ನಡ ಶಾಲೆಗಳ ದುಸ್ಥಿತಿಗೆ ತುರ್ತು ಸ್ಪಂದನೆ ಅಗತ್ಯ: ಸಮಿತಿ ಶಿಫಾರಸುಪ್ರಧಾನಿ ನಿವಾಸದ ಎದುರು ಕಾಂಗ್ರೆಸ್‌ ಧರಣಿ: ರಾಹುಲ್ ಸೇರಿ ವಿಪಕ್ಷ ನಾಯಕರು ಪೊಲೀಸ ವಶಕ್ಕೆಪ್ರತಿಭಟನಾಕಾರರಿಗೆ ಎಎಪಿ ನೆರವು: ಕಾನೂನು, ವೈದ್ಯಕೀಯ ಸಹಾಯಕ್ಕೆ ಸಹಾಯವಾಣಿ ಆರಂಭ112ಗೆ ಕರೆ ಬಂದರೆ ಠಾಣೆ ವ್ಯಾಪ್ತಿಯ ನೆಪ ಬೇಡವಿದ್ಯಾರ್ಥಿಗಳ ಥಳಿತ ಭಾರತೀಯ ಸಂಸ್ಕೃತಿಯಲ್ಲ: ಮೋದಿ, ಅಮಿತ ಶಾ ಕ್ಷಮೆಯಾಚಿಸಲಿಮೇದಾಂತ ಆಸ್ಪತ್ರೆಗೆ ಸೋನಮ್ ವಾಂಗ್ಚುಕ ಸ್ಥಳಾಂತರಕ್ಕೆ ಹೈಕೋರ್ಟ ಅನುಮತಿ