LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಚುನಾವಣಾ ಪ್ರಮಾಣ ಪತ್ರದಲ್ಲಿ ಮಾಹಿತಿ ಮರೆಮಾಚಿದ ಬಿಜೆಪಿ ಶಾಸಕರಿಗೆ ಜೈಲುಶಿಕ್ಷೆ

ಬೆಂಗಳೂರು, ೧೪- ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಮಾಹಿತಿ ಮರೆಮಾಚಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರೊಬ್ಬರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಎರಡು ತಿಂಗಳ ಜೈಲು ಶಿಕ್ಷೆ ಹಾಗೂ 10,000 ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.



ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಉದಯ ಬಿ. ಗರುಡಾಚಾರ ಶಿಕ್ಷೆಗೊಳಗಾದವರಾಗಿದ್ದು, 2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸುವ ವೇಳೆ ನೀಡಿದ್ದ ಪ್ರಮಾಣ ಪತ್ರದಲ್ಲಿ ಅವರು, ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ, ಕಂಪನಿಯೊಂದರಲ್ಲಿ ತಾವು ವ್ಯವಸ್ಥಾಪಕ ನಿರ್ದೇಶಕನಾಗಿರುವುದು ಹಾಗೂ ಪತ್ನಿಯ ಬ್ಯಾಂಕ್ ಖಾತೆಯ ವಿವರಗಳನ್ನು ಬಹಿರಂಗಪಡಿಸಿರಲಿಲ್ಲ ಎಂದು ಹೇಳಲಾಗಿದೆ.



ಈ ಹಿನ್ನೆಲೆಯಲ್ಲಿ ಬನಶಂಕರಿ ಮೂರನೇ ಹಂತದ ನಿವಾಸಿ ಎಚ್.ಜಿ. ಪ್ರಶಾಂತ ಎಂಬವರು ಖಾಸಗಿ ದೂರು ಸಲ್ಲಿಸಿದ್ದು, ಇದರ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಡೆಸಿತ್ತು. ಇದೀಗ ತೀರ್ಪು ಹೊರ ಬಿದ್ದಿದ್ದು, ಶಾಸಕರ ವಿರುದ್ಧದ ಆರೋಪ ದೃಢಪಟ್ಟಿರುವ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಪ್ರೀತ್ ಜೆ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಇದರ ಜೊತೆಗೆ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದ್ದು, ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹವಳದ ದಿಬ್ಬಗಳ ನಡುವೆ ರಾಹುಲ್ ಸಾಹಸರೂಪಾಯಿ 100 ತಲುಪಿದರೂ ಆತಂಕ ಬೇಡ ಎಂದ ಮೋದಿಯ ಆರ್ಥಿಕ ಸಲಹೆಗಾರ್ತಿ : ವ್ಯಾಪಕ ಟೀಕೆಅಮೂಲ್ಯ ಪರಿಸರ ಸಂಪತ್ತಿಗೆ ಬೆದರಿಕೆ ಒಡ್ಡಿದ ಯೋಜನೆ ಗ್ರೇಟ್ ನಿಕೋಬಾರ್ ಯೋಜನೆಭಿನ್ನಾಭಿಪ್ರಾಯ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದ ಸಿಎಂಖಾತೆ ಹಂಚಿಕೆ ಕಿಡಿ: ಮುನಿಯಪ್ಪ ಅಸಮಾಧಾನ, ಖಾತೆ ವಹಿಸಿಕೊಳ್ಳಲು ನಿರಾಕರಣೆಗುಂಡಿನ ದಾಳಿಗೆ ನಲುಗಿದ ಮಣಿಪುರ : ಮೂವರು ನಾಗರಿಕರ ಹತ್ಯೆ, 7 ಮನೆಗಳಿಗೆ ಬೆಂಕಿ ರೆಪೊ ದರದಲ್ಲಿ ಬದಲಾವಣೆ ಇಲ್ಲಖಾತೆ ಹಂಚಿಕೆ ಬಗ್ಗೆ ಅಸಮಾಧಾನ; ಸಚಿವ ಸ್ಥಾನ ತೊರೆದ ರಾಮಲಿಂಗಾ ರೆಡ್ಡಿಖಾತೆಗಳ ಹಂಚಿಕೆ ಕಸರತ್ತು ಪೂರ್ಣ, ಯಾರಿಗೆ ಯಾವ ಖಾತೆ? ಜೀವ ಉಳಿಸಿದ ಮಾನವೀಯತೆ : ದಿಲ್ಲಿ ಅಗ್ನಿ ದುರಂತದಲ್ಲಿ ಮುಸ್ಲಿಂ ಯುವಕರ ಸಾಹಸಕ್ಕೆ ವ್ಯಾಪಕ ಮೆಚ್ಚುಗೆ