ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ರಾಜ್ಯೋತ್ಸವ ಆಚರಣೆಗೆ ಕನ್ನಡ ಸಂಘಟನೆಗಳ ಪಟ್ಟು

ಬೆಂಗಳೂರು:  ತ್ರಿವರ್ಣ ಧ್ವಜ, ಗಣೇಶ ಗಲಾಟೆಯ ಬಳಿಕ ಈಗ ಚಾಮರಾಜಪೇಟೆಯ  ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡುವಂತೆ ಕನ್ನಡ ಸಂಘಟನೆಗಳು ಹಾಗೂ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಪಟ್ಟು ಹಿಡಿದಿದ್ದಾರೆ.

ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸರ್ಕಾರದಿಂದಲೇ ಸ್ವಾತಂತ್ರ್ಯೋತ್ಸವದ ದಿನ ತ್ರಿವರ್ಣ ಧ್ವಜಾರೋಹಣ ನೆರವೇರಿಸಿತ್ತು. ಆದರೆ ಕೊನೆ ಕ್ಷಣದವರೆಗೂ ಒತ್ತಾಯಿಸಿದ್ದರೂ ಗಣೇಶೋತ್ಸವಕ್ಕೆ ಸುಪ್ರೀಮ ಕೋರ್ಟ‌ನಿಂದ ಅನುಮತಿ ಸಿಕ್ಕಿರಲಿಲ್ಲ.

ಇದೀಗ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಪಟ್ಟು ಹಿಡಿಯಲಾಗಿದೆ. ಕನ್ನಡ ಸಂಘಟನೆಗಳಿಗೆ ಕನ್ನಡ ಬಾವುಟ ಹಾರಿಸಲು ಅವಕಾಶ ಕೊಡಬೇಕು. ಈ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವವನ್ನ ಆಚರಿಸಬೇಕೆಂಬ ಧ್ವನಿ ಎತ್ತಿದ್ದು ನಾವು. ಸರ್ಕಾರ ಕನ್ನಡ ಹೋರಾಟಗಾರರಿಗೆ ಅವಕಾಶ ಕೊಡಬೇಕು. ಇದರಲ್ಲಿಯೂ ರಾಜಕೀಯ ಮಾಡಲು ಹೋಗಬೇಡಿ ಎಂದು ಕನ್ನಡ ಪರ ಹೋರಾಟಗಾರರು ಹೇಳಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.